



ಮಣಿಪಾಲ: ಇತ್ತೀಚೆಗೆ ನಡೆದ ಅಪಘಾತ ದಲ್ಲಿ ಸಾವು ಬದುಕಿನ ನಡುವೆ ಹೋರಾಡುತಿದ್ದ ಕೊಕ್ಕರ್ಣೆಯ ನವೀನ್ ಅವರ ಮೆದುಳು ನಿಷ್ಕ್ರಿಯ ವಾದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆ ಯ ವೈದ್ಯ ಅಧಿಕಾರಿ ಯ ಮೇರೆಗೆ ಅವರ ಅಂಗಾಂಗ ದಾನ ಮಾಡಲು ಕುಟುಂಬ ನಿರ್ಧರಿಸಿತು. ಎರಡು ಮೂತ್ರಪಿಂಡಗಳು ಯಕೃತ್, ಚರ್ಮ, ಎರಡು ಕಾರ್ನಿಯಾ-ಕಣ್ಣುಗುಡ್ಡೆಗಳ ದಾನ ಮಾಡಲಾಗಿತು. ದಾನ ಮಾಡಿದ ಅಂಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಮಣಿಪಾಲದಿಂದ ಮಂಗಳೂರಿಗೆ ರವಾನೆ ಮಾಡಲಾಯಿತು. ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸಹಕಾರ ನೀಡಿದ್ದರು. ಮಂಗಳೂರು, ಮಣಿಪಾಲ ಕೆ ಎಂ ಸಿ ಗಳಲ್ಲಿ ಅರ್ಹ ರೋಗಿಗಳಿಗೆ ಅಂಗಾಂಗ ಅಳವಡಿಕೆ ಮಾಡಲಾಗುತ್ತಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.