



ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ 'ಇಂಡಿಯಾ' ಎಂಬ ಹೆಸರಿನ ಬದಲು 'ಭಾರತ' ಎಂಬ ಹೆಸರನ್ನು ಬಳಸಬೇಕು ಎಂದು ಎನ್‌ಸಿಇಆರ್‌ಟಿ ರಚಿಸಿದ್ದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿರುವುದು 'ತಪ್ಪು' ಮತ್ತು ಈ ಕ್ರಮದ ಹಿಂದೆ ಎನ್‌ಡಿಎ ಕೈವಾಡವಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪಠ್ಯಕ್ರಮದಲ್ಲಿ 'ಪುರಾತನ ಇತಿಹಾಸ'ದ ಬದಲಿಗೆ 'ಶಾಸ್ತ್ರೀಯ ಇತಿಹಾಸ'ವನ್ನು ಅಳವಡಿಸಬೇಕು. ಎಲ್ಲಾ ವಿಷಯಗಳಲ್ಲಿಯೂ 'ಭಾರತೀಯ ಜ್ಞಾನ ವ್ಯವಸ್ಥೆ'ಯನ್ನು (ಐಕೆಎಸ್) ಅಳವಡಿಸಬೇಕು ಎಂಬ ಶಿಫಾರಸನ್ನು ಕೂಡ ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ತಿಳಿಸಿದ್ದಾರೆ.
ಆದರೆ, ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಕುಮಾರ್, 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಮತ್ತು ಇಂಡಿಯನ್ ಫಾರಿನ್ ಸರ್ವಿಸ್ ಏಕೆ ಇನ್ನೂ ಇವೆ. ಇವುಗಳಲ್ಲಿ ಏಕೆ ಇನ್ನೂ ಭಾರತ ಎಂಬ ಪದವನ್ನು ಬಳಸಿಲ್ಲ. ಭಾರತೀಯ ಪಾಸ್‌ಪೋರ್ಟ್‌ನಲ್ಲಿ 'ರಿಪಬ್ಲಿಕ್ ಆಫ್ ಇಂಡಿಯಾ' ಎಂದು ಏಕೆ ಬರೆಯಲಾಗಿದೆ' ಎಂದು ಪ್ರಶ್ನಿಸಿದರು. ಈ ಸರ್ಕಾರಕ್ಕೆ ಏನೋ ಆಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯ ಯುವ ಮನಸ್ಸುಗಳನ್ನು ಏಕೆ ಗೊಂದಲಗೊಳಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಎನ್‌ಡಿಎ ಸರ್ಕಾರವು ಎನ್‌ಸಿಇಆರ್‌ಟಿಯನ್ನು ಈ 'ನಿರ್ಧಾರ' ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಈ ಕ್ರಮವು ಸಂಪೂರ್ಣ ತಪ್ಪು ಎಂದ ಅವರು, ಈ ಶಿಫಾರಸನ್ನು ಸ್ವೀಕರಿಸದಂತೆ ಕೇಂದ್ರಕ್ಕೆ ಮನವಿ ಮಾಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.