logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ನೀಟ್ 2024: ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ಅರ್ಜುನ್‌'ಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ರ‍್ಯಾಂಕ್.

ಟ್ರೆಂಡಿಂಗ್
share whatsappshare facebookshare telegram
7 Jun 2024
post image

ನೀಟ್ 2024: ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ಅರ್ಜುನ್‌'ಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ರ‍್ಯಾಂಕ್.

ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಟ್ಟು 720 ಅಂಕಗಳಲ್ಲಿ 720 ಅಂಕ ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ಮೊದಲ ಬಾರಿಗೆ ರಾಜ್ಯಕ್ಕೆ ಮೊದಲ ಬಾರಿಗೆ ಪ್ರಥಮ ರ‍್ಯಾಂಕ್ ದೊರೆತಿರುವುದು ಹೆಮ್ಮೆಯ ವಿಚಾರವಾಗಿದೆ. 720ರಲ್ಲಿ 715 ಅಂಕವನ್ನು ಪಡೆದ ಕಾಲೇಜಿನ ವಿದ್ಯಾರ್ಥಿ ಸಂಜನಾ ಸಂತೋಷ್ ಕಟ್ಟಿ ಜನರಲ್ ಮೆರಿಟ್ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 255ನೇ ರ‍್ಯಾಂಕ್, 710 ಅಂಕ ಪಡೆದ ಉತ್ಸವ್ ಆರ್ 533ನೇ ರ‍್ಯಾಂಕ್, 710 ಅಂಕ ಪಡೆದ ಅಮನ್ ಅಬ್ದುಲ್ ಹಕೀಂ 592ನೇ ರ‍್ಯಾಂಕ್, 705 ಅಂಕ ಪಡೆದ ವಿಘ್ನೇಶ್ ಎಂ.ಆರ್. 1114ನೇ ರ‍್ಯಾಂಕ್, 705 ಅಂಕ ಪಡೆದ ಮಿಹಿರ್ ಗಿರೀಶ್ ಕಾಮತ್, 1164ನೇ ರ‍್ಯಾಂಕ್ ಪಡೆದರೆ, 705 ಅಂಕ ಪಡೆದ ಸಾಯಿ ಭೇಶಜ್ ಜಿ 1223ನೇ ರ‍್ಯಾಂಕ್, 700 ಅಂಕ ಪಡೆದ ಲಿಂಗರಾಜ್ ಹೀರೆಮಠ್ 1708ನೇ ರ‍್ಯಾಂಕ್, 700 ಅಂಕ ಪಡೆದ ಪ್ರಣವ್ ಟಾಟಾ ಆರ್. 1737ನೇ ರ‍್ಯಾಂಕ್, 700 ಅಂಕ ಪಡೆದ ಪ್ರತೀಕ್ ಪಿ. ಗೌಡ 1931ನೇ ರ‍್ಯಾಂಕ್, 700 ಅಂಕ ಪಡೆದ ಆಕಾಶ್ ಎಸ್. ಕನಕವಾಡಿ 2013ನೇ ರ‍್ಯಾಂಕ್, 700 ಅಂಕ ಪಡೆದ ಸಂಜನ್ ಡಿ. 2110ನೇ ರ‍್ಯಾಂಕ್, 700 ಅಂಕ ಪಡೆದ ಸ್ವಸ್ತಿಕ್ ಅಖಿಲ್ ಶರ್ಮಾ 2197ನೇ ರ‍್ಯಾಂಕ್, 700 ಅಂಕ ಪಡೆದ ಲೋಚನ್ ಬಿ.ಎಚ್. 2198ನೇ ರ‍್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದಾರೆ.

ಜನರಲ್ ಮೆರಿಟ್‌ನಲ್ಲಿ ಅಖಿಲ ಭಾರತ ಮಟ್ಟದ ಮೊದಲ ಒಂದು ಸಾವಿರ ರ‍್ಯಾಂಕ್‌ಗಳಲ್ಲಿ 4 ರ‍್ಯಾಂಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆತಿದೆ.

ದಿಲ್ಲಿ ಏಮ್ಸ್ ಸೇರುತ್ತೇನೆ: ಸಿಇಟಿ ಈ ಬಾರಿಯ ಗೊಂದಲ ನೋಡುತ್ತಿದ್ದಂತೆ ಇದು ನನಗೆ ಸಂಬಂಧಿಸಿದ ಪರೀಕ್ಷೆಯಲ್ಲ. ಈ ಕುರಿತು ಸಿರೀಯಸ್‌ನೆಸ್ ಬಿಟ್ಟು ನೀಟ್ ಕಡೆಗೆ ಫೋಕಸ್ ಮಾಡಿದೆ. ನೀಟ್‌ನಲ್ಲಿ ರ‍್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ ಮೊದಲ ರ‍್ಯಾಂಕ್ ಬರುತ್ತದೆ ಎಂದುಕೊಂಡಿರಲಿಲ್ಲ. ಮೊದಲ ರ‍್ಯಾಂಕ್ ಬಹಳ ಖುಷಿಕೊಟ್ಟಿದೆ. ದಿಲ್ಲಿಯ ಏಮ್ಸ್ನಲ್ಲಿ ಸೇರುವ ಬಯಕೆಯಿದೆ ಎಂದು ಪ್ರಥಮ ರ‍್ಯಾಂಕ್ ಪಡೆದ ಎಕ್ಸ್ಪರ್ಟ್ ವಿದ್ಯಾರ್ಥಿ ಅರ್ಜುನ್ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷವಾಗಿ ಎಕ್ಸ್ಪರ್ಟ್ ಕಾಲೇಜಿನ ನೀಟ್ ಮೊಡ್ಯುಲ್‌ಗಳು, ಉಪನ್ಯಾಸಕರು ನೀಡಿದ ಟಿಪ್ಸ್, ನೋಟ್ಸ್ಗಳು, ಇದರ ಜತೆಗೆ ಎನ್‌ಸಿಆರ್‌ಟಿ ಪಠ್ಯಪುಸ್ತಕದ ಜತೆಗೆ ನನ್ನ ಶ್ರಮ ಸೇರಿದರಿಂದ ರ‍್ಯಾಂಕ್‌ಗಳಿಸಲು ಸಾಧ್ಯವಾಯಿತು ಎನ್ನುವುದು ಅರ್ಜುನ್ ಕಿಶೋರ್ ಅವರ ರ‍್ಯಾಂಕ್ ಸಿಕ್ರೇಟ್. ಮೈಸೂರು ಗೋಕುಲಂ ನಿವಾಸಿ, ಮೈಸೂರು ಮೆಡಿಕಲ್ ಕಾಲೇಜಿನ ಫಾರ್ಮಾಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಕಿಶೋರ್, ಮೈಸೂರಿನ ಕ್ಯಾಗ್ರೋಕೇರ್ ಆಸ್ಪತ್ರೆಯ ಗೈನೋಕೋಲಾಜಿಸ್ಟ್ ಡಾ. ರಶ್ಮಿ ಅವರ ಪುತ್ರರಾಗಿದ್ದಾರೆ.

**ಇನ್ನು ಹೆಚ್ಚಿನ ರ‍್ಯಾಂಕ್ ನಿರೀಕ್ಷೆಯಿತ್ತು: ** ಸಿಇಟಿ ರ‍್ಯಾಂಕ್ ಜತೆ ಇದೀಗ ನೀಟ್‌ನಲ್ಲೂ ರ‍್ಯಾಂಕ್ ಸಿಕ್ಕಿರುವುದು ಬಹಳ ಖುಷಿ ಕೊಟ್ಟಿದೆ. ಆದರೆ ನೀಟ್‌ನಲ್ಲಿ ಇನ್ನು ಹೆಚ್ಚು ರ‍್ಯಾಂಕ್ ಪಡೆಯುವ ನಿರೀಕ್ಷೆಯಿತ್ತುö ಎಂದು ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಸಂಜನಾ ಸಂತೋಷ್ ಕಟ್ಟಿ ಹೇಳುತ್ತಾರೆ. ನೀಟ್‌ನಲ್ಲಿ ಇನ್ನು ಹೆಚ್ಚಿನ ರ‍್ಯಾಂಕ್ ಬಂದಿದ್ದರೆ ಹೊಸದಿಲ್ಲಿಯ ಏಮ್ಸ್ನಲ್ಲಿ ಕಲಿಯುವ ಆಸಕ್ತಿಯಿತ್ತು. ನಿರೀಕ್ಷೆಯಿಂದ ಕಡಿಮೆ ರ‍್ಯಾಂಕ್ ಹಿನ್ನೆಲೆ ಬಂದಿರುವ ಕಾರಣದಿಂದ ಮುಂದೆ ಯೋಚನೆ ಮಾಡಬೇಕಾಗಿದೆ ಎನ್ನುತ್ತಾರೆ ಅವರು. ನೀಟ್‌ನಲ್ಲಿ 720ರಲ್ಲಿ 715 ಅಂಕಗಳಿಸಿಕೊಂಡು ರಾಷ್ಟçಮಟ್ಟದಲ್ಲಿ 255 ರ‍್ಯಾಂಕ್‌ಗಳಿಸಿದ್ದಾರೆ. ಇವರು ಮೂಲತಃ ಬಿಜಾಪುರದ ಸಿಂದಗಿ ತಾಲೂಕಿನವರಾಗಿದ್ದು ತಂದೆ ಸಂತೋಷ್ ಕಟ್ಟಿ ಸಾಫ್ಟ್ವೇರ್ ಎಂಜಿನಿಯರ್, ತಾಯಿ ಸ್ನೇಹಾ ಕಟ್ಟಿ ಗೃಹಿಣಿಯಾಗಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.