



ಕಟ್ಮಂಡು : ಮೇ.29 ರಂದು ಇಂದು ಬೆಳಗ್ಗೆ ನಾಪತ್ತೆಯಾಗಿದ್ದ ವಿಮಾನ ವು ಸಂಜೆ ವೇಳೆಗೆ ಪತ್ತೆಯಾಗಿದೆ
ವಿಮಾನವು ಮುಸ್ತಾಂಗ್ ಜಿಲ್ಲೆಯಲ್ಲಿ ಹಾರಾಟ ನಡೆಸಿದ್ದು ಕಾಣಿಸಿಕೊಂಡ ಬಳಿಕ ಧೌಲಗಿರಿ ಪರ್ವತದತ್ತ ಹಾರಿದ ಬಳಿಕ ಕಣ್ಮರೆಯಾಗಿದೆ. ಇದೀಗ ವಿಮಾನ ಪತ್ತೆಯಾಗಿದೆ. ತಾರಾ ಏರ್ ವಿಮಾನವು ಬೆಳಿಗ್ಗೆ 9.55 ಕ್ಕೆ ಪೋಖರಾದಿಂದ ಟೇಕಾಫ್ ಆಗಿದ್ದು, 15 ನಿಮಿಷಗಳ ನಂತರ ನಿಯಂತ್ರಣ ಗೋಪುರದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ. ನಂತರ ವಿಮಾನವು ಕೋವಾಂಗ್ ಗ್ರಾಮದಲ್ಲಿ ಪತ್ತೆಯಾಗಿದೆ.
ಮುಂಬೈ ಮೂಲದ ಅಶೋಕ್ ಕುಮಾರ್ ತ್ರಿಪಾಠಿ, ಧನುಶ್ ತ್ರಿಪಾಠಿ, ರಿತಿಕಾ ತ್ರಿಪಾಠೀ ಮತ್ತು ವೈಭವ ತ್ರಿಪಾಠಿ ಒಂದೇ ಕುಟುಂಬ ನಾಲ್ವರು ಇದ್ದರು. ಮೂವರು ಸಿಬ್ಬಂದಿ ಸೇರಿ ಜರ್ಮನ್ನ ಇಬ್ಬರು ಮತ್ತು 13 ಮಂದಿ ನೇಪಾಳ ಮೂಲದವರಿದ್ದರು ಎಂದು ಏರ್ಲೈನ್ ವಕ್ತಾರ ಸುದರ್ಶನ್ ಭರ್ತುವಾಲ ತಿಳಿಸಿದ್ದಾರೆ.
ನೇಪಾಳ ರಾಯಭಾರ ಕಚೇರಿಯ ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ: 977-9851107021
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.