



ನವದೆಹಲಿ: ಪೈಲಟ್‌ಗಳು, ಗಗನಸಖಿಯರು, ಮತ್ತು ವಿಮಾನ ಸಿಬ್ಬಂದಿ ಸುಗಂಧ ದ್ರವ್ಯ ಬಳಸುವುದನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರ ಕಚೇರಿ (DGCA) ತನ್ನ ಹೊಸ ನವೀಕರಿಸಿದ ಮಾರ್ಗಸೂಚಿಗಳಲ್ಲಿ ಪೈಲಟ್‌ಗಳು ಮತ್ತು ಫ್ಲೈಟ್ ಅಟೆಂಡೆಂಟ್‌ಗಳು ಸುಗಂಧ ದ್ರವ್ಯವನ್ನು ಬಳಸುವುದನ್ನು ನಿಷೇಧಿಸಲು ಪ್ರಸ್ತಾಪಿಸಿದೆ.
ದೇಶದ ವಾಯುಯಾನ ಉದ್ಯಮವನ್ನು ನೋಡಿಕೊಳ್ಳುವ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಕಚೇರಿಯು ಇತ್ತೀಚೆಗೆ ಮದ್ಯ ಸೇವನೆಗೆ ಸಂಬಂಧಿಸಿದಂತೆ ತನ್ನ ಬೈಲಾಗಳಿಗೆ ನವೀಕರಣವನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ಸುಗಂದ ದ್ರವ್ಯ ಬಳಕೆ ನಿಷೇಧ ಸೇರಿದೆ. ಈ ಪ್ರಸ್ತಾಪಿತ ನಿಷೇಧವು ಸುಗಂಧ ದ್ರವ್ಯ ಹಾಗೂ ಆಲ್ಕೊಹಾಲ್‌ಯುಕ್ತ ಪಾನೀಯಗಳಿಗೂ ಅನ್ವಯವಾಗಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.