logo
WhatsApp Image 2026-04-02 at 14.46.04.jpeg
hindalco everlast.jpeg

ಆಷಾಢಕ್ಕೆ ತವರು ಮನೆ ಬಂದಿದ್ದ ನವವಧು ಪ್ರಿಯಕರ ಜತೆ ಪರಾರಿ: ಸಿಕ್ಕಿ ಬಿದ್ದ ಬಳಿಕ ಮನನೊಂದು ನೇಣಿಗೆ ಶರಣು

ಟ್ರೆಂಡಿಂಗ್
share whatsappshare facebookshare telegram
11 Aug 2022
post image

ಮೈಸೂರು:

ಆಷಾಢ ಮಾಸಕ್ಕಾಗಿ ತವರು ಮನೆಗೆ ಬಂದಿದ್ದ ನವ ವಧು ಪಕ್ಕದ ಮನೆಯಲ್ಲಿದ್ದ ಪ್ರಿಯಕರನ ಜತೆ ಪರಾರಿಯಾಗಿದ್ದು, ಪೊಲೀಸರಿಗೆ ಸಿಕ್ಕಿ ಬಿದ್ದ ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಒಂದು ವಾರದಲ್ಲಿ ನವವಧುವನ್ನು

ಪತ್ತೆ ಮಾಡಿ ಪ್ರಿಯಕರನಿಂದ ಬೇರ್ಪಡಿಸಿದ್ದರು.

ಪ್ರಿಯಕರನಿಂದ ದೂರವಾದರಿಂದ ಮನನೊಂದ ನವವಧು ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕು ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ವರ್ಷಿತಾ(20) ಮೃತಪಟ್ಟಿರುವ ನವವಧು. ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಮಗಳ ಮನ ಒಲಿಸಿ ಚಾಮರಾಜನಗರದ ಯುವಕನೊಂದಿಗೆ ಮೇ 8 ರಂದು ಅದ್ಧೂರಿಯಾಗಿ ಆಕೆಯ ವಿವಾಹ ಮಾಡಿಕೊಡಲಾಗಿತ್ತು.

ಆಷಾಢ ಮಾಸ ಹಿನ್ನೆಲೆ ವರ್ಷಿತಾ ತವರು ಮನೆ ಕಾರ್ಯಕ್ರಮಕ್ಕೆ ಆಗಮಿಸಿದ್ದಳು. ಈ ವೇಳೆ ಪಕ್ಕದ ಮನೆಯಲ್ಲಿದ್ದ ಪ್ರಿಯತಮ ಕಿರಣ್ ಜತೆ ಮನೆ ಬಿಟ್ಟು ಪರಾರಿಯಾಗಿದ್ದಳು.

ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರೇಮಿಗಳು ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು, ವಾಪಸ್ ಕರೆತಂದ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಅವರ ಮನೆಗೆ ಕಳುಹಿಸಿದ್ದರು.

ನಂತರ ಆಕೆ ಮೈಸೂರಿನಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿ 3 ದಿನ ಕಳೆದು, ನಂತರ ರಾಂಪುರ ಗ್ರಾಮದಲ್ಲಿರುವ ತನ್ನ ತಾತನ ಮನೆಗೆ ಬಂದಿದ್ದಳು ಎನ್ನಲಾಗಿದೆ.

ಪ್ರಿಯಕರ ದೂರವಾಗಿದ್ದರಿಂದ ಮನನೊಂದಿದ್ದ ವರ್ಷಿತಾ ತಾತನ ಮನೆಯ ವಾಶ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.