


ಕಾರ್ಕಳ: ಡಿ. 24 ರಿಂದ 30 ರ ವರೆಗೆ ಡಾ|ಎನ್ನ್. ಎಸ್. ಎ. ಎಂ ಪ್ರಥಮ ದರ್ಜೆ ಕಾಲೇಜು ನಿಟ್ಟೆ ಯ 33ನೆಯ ಎನ್ನೆಸ್ಸೆಸ್ ವಾರ್ಷಿಕ ಶಿಬಿರವು, ಶ್ರೀ ಲಕ್ಷ್ಮೀ ಜನಾರ್ದನ ಪ್ರಾಥಮಿಕ ಶಾಲೆ,ಎಳ್ಳಾರೆ ಯಲ್ಲಿ ನಡೆಯಲಿದೆ. ಅದರ ಪ್ರಯುಕ್ತ ತಾರೀಕು 26-12-2024 ನೆ ಗುರುವಾರ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯ, ಮಂಗಳೂರು. ನಿಟ್ಟೆ ಗಾಜ್ರಿಯಾ ಆಸ್ಪತ್ರೆ, ಕಾರ್ಕಳ, ಪ್ರಸಾದ್ ನೇತ್ರಾಲಯ, ಉಡುಪಿ. ಪ್ರಾಥಮಿಕ ಆರೋಗ್ಯ ಕೇಂದ್ರ, ದೊಂಡೇರಂಗಡಿ, NCD ಘಟಕ - ಸಮುದಾಯ ಆರೋಗ್ಯ ಕೇಂದ್ರ, ಹೆಬ್ರಿ ಈ ಎಲ್ಲ ಆಸ್ಪತ್ರೆಗಳ ಮತ್ತು ಊರಿನ ಹಲವಾರು ಸಂಘಟನೆಗಳ ಸಂಯೋಜನೆಯಲ್ಲಿ "ಉಚಿತ ನೇತ್ರ,ಆರೋಗ್ಯ, ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ" ನಡೆಯಲಿದೆ.*
ಹಲ್ಲು ತಪಾಸಣೆ (checking) ಹಲ್ಲು ಸ್ವಚ್ಛಗೊಳಿಸುವುದು(cleaning) ಹಲ್ಲು ಫಿಲ್ಲಿಂಗ್ (filling) ಹಲ್ಲು ತೆಗೆಯುದು (extracting) ಕಣ್ಣಿನ ತಪಾಸಣೆ ಮತ್ತು ಸೂಕ್ತ ಮಾರ್ಗದರ್ಶನ. ಬಿಪಿ, ಮಧುಮೇಹ, ಎದೆನೋವು, ಉಬ್ಬಸ, ಮೈ ಕೈ ನೋವು, ನಿಶ್ಶಕ್ತಿ, ಕೆಮ್ಮು, ಶೀತ, ಜ್ವರ ಇತ್ಯಾದಿ ಸಾಮಾನ್ಯ ಅರೋಗ್ಯ ತಪಾಸಣೆ ನಡೆಯಲಿರುವುದು. ಶಿಬಿರದಲ್ಲಿ 27-12-2024 ನೇ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ, ಅಗ್ನಿ ಸುರಕ್ಷತೆ ಕುರಿತು ಕಾರ್ಯಗಾರ. 29-12-2024 ನೇ ರವಿವಾರ. "ಕೆಸರ್ ಡೊಂಜಿ ದಿನ, ಪ್ರತಿದಿನ ಸಂಜೆ 6:45 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. 30-12-2024 ಸೋಮವಾರ ಸಮಾರೋಪ ಸಮಾರಂಭ ನಡೆಯಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.