logo
WhatsApp Image 2026-04-02 at 14.46.04.jpeg
hindalco everlast.jpeg

ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 'ವಚನ ದಿನ' ಆಚರಣೆ

ಟ್ರೆಂಡಿಂಗ್
share whatsappshare facebookshare telegram
13 Sept 2023
post image

ನಿಟ್ಟೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ) ಕಾರ್ಕಳ ತಾಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ 'ವಚನ ದಿನ' ಕಾರ್ಯಕ್ರಮವನ್ನು ಸೆ.೧೧ ರಂದು ಮಧ್ಯಾಹ್ನ 02.30 ಕ್ಕೆ ಹಮ್ಮಿಕೊಳ್ಳಲಾಯಿತು. ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಪೂಜ್ಯರ ಜಯಂತಿ ಪ್ರಯುಕ್ತ ಡಾ. ಎನ್.ಎಸ್.ಎ.ಎಂ ಕನ್ನಡ ಮಾಧ್ಯಮ ಹೈಯರ್ ಪ್ರೈಮರಿ ಸ್ಕೂಲ್, ನಿಟ್ಟೆಯಲ್ಲಿ ಮಕ್ಕಳಿಗೆ ವಚನಗಳಲ್ಲಿ ನಿಸರ್ಗದ ಪರಿಕಲ್ಪನೆ - ವಚನ ಸ್ಪರ್ಧೆ - ಗಾಯನ ಮತ್ತು ಅದರ ವಿಶ್ಲೇಷಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸುಮಾರು 25 ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಕ್ಯಾಂಪಸ್‌ ಮೈಂಟೆನೆನ್ಸ್ & ಡೆವಲಪ್ಮೆಂಟ್ ನಿರ್ದೇಶಕ ಎ.ಯೋಗೀಶ್ ಹೆಗ್ಡೆ ವಹಿಸಿದ್ದರು. ಅವರು ನೆರೆದಿದ್ದ ಮಕ್ಕಳಿಗೆ, ಜೆ ಸ್ ಸ್ ವಿದ್ಯಾ ಸಂಸ್ಥೆಯನ್ನು ಬೆಳೆಸುವಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪಾತ್ರ ಹಾಗು ಬಸವಣ್ಣನವರ ವಚನಗಳ ಹಿರಿಮೆಯ ಬಗ್ಗೆ ಅರಿವು ನೀಡಿದರು. ಶಾಲೆಯ ಪ್ರಾಂಶುಪಾಲೆ ಶ್ರೀಮತಿ ರಾಧಾ ಪ್ರಭು ಅವರು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಬಹಳ ಅಗತ್ಯ ಎಂದು ಹೇಳಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಶಂಕರ್ ಬಿ ಬಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶುಭ ಕೋರಿದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಹಾಗೂ ನಿಟ್ಟೆ ಕ್ಯಾಂಪಸ್ ಮಹಿಳಾ ಹಾಸ್ಟೆಲ್ಸ್ ನ ಚೀಫ್ ವಾರ್ಡನ್ ಡಾ. ವೀಣಾ ದೇವಿ ಶಾಸ್ತ್ರೀಮಠ ಇವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ - ಕಾರ್ಕಳ ತಾಲೂಕು ಅಧ್ಯಕ್ಷರು ಮತ್ತು ಕದಳಿ ಮಹಿಳಾ ವೇದಿಕೆ ಉಡುಪಿ ಜಿಲ್ಲೆಯ ಪ್ರಧಾನ ಅಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಅವರು ತಮ್ಮ ಪ್ರಸ್ತಾವನೆಯಲ್ಲಿ ಶರಣರ ವಚನಗಳ ಅದ್ರಶ್ಗಳನ್ನು ಜನರಲ್ಲಿ ಉಣಬಡಿಸಿ ಅರಿವಿನ ವ್ಯಾಪ್ತಿಯನ್ನು ಹೆಚ್ಚಿಸಿದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಪೂಜ್ಯರ ಮಹಾನ್ ಸಾಧನೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ನಿರೀಕ್ಷಾ ಅವರು ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.