



ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI ) ಟೆಲಿಕಾಂ ಕಂಪನಿಗಳ ಮೇಲೆ ದೊಡ್ಡ ಕ್ರಮ ಕೈಗೊಂಡಿದೆ. ಇನ್ನೂ ಮುಂದೆ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಹೊಸ ಆದೇಶವನ್ನು ಹೊರಡಿಸಿದ್ದು, ಅದರ ಪ್ರಕಾರ ಕಂಪನಿಗಳು ಇಡೀ ತಿಂಗಳು ಮಾನ್ಯವಾಗಿರುವ ಕನಿಷ್ಠ ಒಂದು ಯೋಜನೆಯನ್ನು ಇರಿಸಿಕೊಳ್ಳಬೇಕು ಎಂದು ಹೇಳಿದೆ. ಟೆಲಿಕಾಂ ಕಂಪನಿಗಳು ಕನಿಷ್ಠ ಒಂದು ಪ್ಲಾನ್, ಒಂದು ವಿಶೇಷ ಟ್ಯಾರಿಫ್ ವೋಚರ್ ಮತ್ತು ಒಂದು ವಿಶೇಷ ರೀಚಾರ್ಜ್ ಪ್ಲಾನ್‌ಅನ್ನು ಇಡೀ ತಿಂಗಳು ವ್ಯಾಲಿಡಿಟಿಯೊಂದಿಗೆ ಇಟ್ಟುಕೊಳ್ಳಬೇಕು ಎಂದು ಟ್ರಾಯ್ ಹೇಳಿದೆ. ಈ ದಿನಾಂಕವು ಮುಂದಿನ ತಿಂಗಳು ಬರದಿದ್ದರೆ, ಮುಂಬರುವ ತಿಂಗಳ ಕೊನೆಯ ದಿನಾಂಕದಂದು ರೀಚಾರ್ಜ್ ಮಾಡುವ ಅವಶ್ಯಕತೆಯಿದೆ. ಇದನ್ನು ಜಾರಿಗೆ ತರಲು ಕಂಪನಿಗಳಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಜೂನ್ 1, 2022 ರಿಂದ ಒಂದು ತಿಂಗಳ ಯೋಜನೆ ಅಗತ್ಯವಾಗುತ್ತದೆ. ಈ ಯೋಜನೆಯು ತಿಂಗಳ ಕೊನೆಯ ದಿನಾಂಕದವರೆಗೆ ಮಾನ್ಯವಾಗಿರುತ್ತದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.