logo
WhatsApp Image 2026-04-02 at 14.46.04.jpeg
hindalco everlast.jpeg

ರಾಜ್ಯದಲ್ಲಿ 7.31 ಲಕ್ಷ ಮತದಾರರಿಗೆ ನೋಟಿಸ್:SIR ದಾಖಲೆ ಸಲ್ಲಿಸಲು ಸೆ.24 ಕೊನೆಯ ದಿನ

ಟ್ರೆಂಡಿಂಗ್
share whatsappshare facebookshare telegram
4 Sept 2026
post image

ಬೆಂಗಳೂರು:** ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟಿಸ್‌ ವಿತರಣೆ ಕಾರ್ಯವನ್ನು ಚುರುಕುಗೊಳಿಸಿದೆ. ಅನ್‌ಮ್ಯಾಪಿಂಗ್‌ ಆಗಿರುವ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಗೊಂದಲವಿರುವ ಪ್ರಕರಣಗಳ ಪರಿಶೀಲನೆಗಾಗಿ ಮತದಾರರಿಗೆ ನೋಟಿಸ್‌ ನೀಡಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 43,81,143 ಮತದಾರರಿಗೆ ನೋಟಿಸ್‌ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ ಇದುವರೆಗೆ 7,31,770 ಮಂದಿಗೆ ನೋಟಿಸ್‌ ವಿತರಿಸಲಾಗಿದೆ. ಇನ್ನೂ 36,49,373 ಮತದಾರರಿಗೆ ನೋಟಿಸ್‌ ನೀಡುವುದು ಬಾಕಿ ಇದೆ.

ನೋಟಿಸ್‌ ಪಡೆದವರ ಪೈಕಿ ಇದುವರೆಗೆ 206 ಮಂದಿಯನ್ನು ಮಾತ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಸೆ.24ರೊಳಗೆ ದಾಖಲೆ ಸಲ್ಲಿಸಬೇಕು

ನೋಟಿಸ್‌ ಪಡೆದ ಮತದಾರರು ಸೆಪ್ಟೆಂಬರ್‌ 24ರೊಳಗೆ ಚುನಾವಣಾ ಆಯೋಗಕ್ಕೆ ಅಗತ್ಯ ದಾಖಲೆಗಳೊಂದಿಗೆ ಉತ್ತರ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿದ್ದರೆ, ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

9.45 ಲಕ್ಷಕ್ಕೂ ಅಧಿಕ ಅರ್ಜಿ

ಇನ್ನು ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ಬದಲಾವಣೆ ಅಥವಾ ಇತರ ಬದಲಾವಣೆಗಳಿಗಾಗಿ ಸಾರ್ವಜನಿಕರಿಂದ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.

ರಾಜ್ಯದಲ್ಲಿ ಇದುವರೆಗೆ 9,45,968 ಮಂದಿ ಫಾರಂ-6, ಫಾರಂ-6A, ಫಾರಂ-7 ಹಾಗೂ ಫಾರಂ-8 ಮೂಲಕ ಅರ್ಜಿ ಸಲ್ಲಿಸಿದ್ದಾರೆ. SIR ಪ್ರಕ್ರಿಯೆಯ ಭಾಗವಾಗಿ ಈ ಅರ್ಜಿಗಳ ಪರಿಶೀಲನೆಯನ್ನೂ ಚುನಾವಣಾ ಆಯೋಗ ನಡೆಸುತ್ತಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.