



ಕಾರ್ಕಳ : ಕಾರ್ಕಳ ತಾಲೂಕು ಸಬಾಂಗಣದಲ್ಲಿ ಎನ್ .ಆರ್ .ಎಲ್ .ಎಂ .ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಲಘು ವಾಹನ ತರಬೇತಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಾಧಿಕಾರಿ ಗುರುದತ್ ಎಂ .ಎನ್ .ಉದ್ಘಾಟಿಸಿ ಸರ್ಕಾರದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸ್ವ ಇಚ್ಛೆಯಿಂದ ತರಬೇತಿಗೆ ಹಾಜರಾಗಿ ಭವಿಷ್ಯದಲ್ಲಿ ಉತ್ತಮ ಚಾಲಕರಾಗಲು ಮುಂದೆ ಬಂದಿರುವ ಮಹಿಳೆಯರಿಗೆ ಶುಭ ಹಾರೈಸಿದರು .ಕೇವಲ ಹಪ್ಪಳ ಸಂಡಿಗೆ ಮಾತ್ರ ಮಾಡಿ ಜೀವನೋಪಾಯ ಸಾಗಿಸುವುದಲ್ಲದೇ ಇಂತಹ ಚಾಲನೆ ತರಬೇತಿ ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳಿ ಎಂದು ಕರೆ ನೀಡಿದರು .ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಪಾಪನಾಯಕ್ ಮಾತನಾಡಿದರು . ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ಪ್ರಾಸ್ತಾವಿಕ ಮಾತನಾಡಿದರು .ಎನ್ .ಆರ್ .ಎಲ್ .ಎಂ .ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಉಪಸ್ಥಿತರು .ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಗಣೇಶ್ ನಾಯ್ಕ್ ನಿರೂಪಿಸಿ ಸ್ವಾಗತಿಸಿದರು .ರುಡ್ಸೆಟ್ ಉಪನ್ಯಾಸಕ ಸಂತೋಷ್ ವಂದಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.