



ಕಾರ್ಕಳ: ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವಲ್ಲಿ ಎನ್ ಎಸ್ ಎಸ್ ಶಿಬಿರವು ಮಹತ್ವದ ಪಾತ್ರವಹಿಸುತ್ತದೆ ಎಂದು ಎಳ್ಳಾರೆ ಲಕ್ಷ್ಮೀ ಜನಾರ್ದನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಕಿಣಿ ಹೇಳಿದರು .ಅವರು ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮಿ ಜನಾರ್ದನ ದೇವಾಲಯದ ಸಭಾಂಗಣದಲ್ಲಿ ನಡೆದ ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ 33 ನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅನುಭವ ಮತ್ತು ಪರಿಶ್ರಮಕ್ಕೆ ಎನ್ ಎಸ್ ಎಸ್ ಹೆಚ್ಚು ಗಮನ ಹರಿಸಲು ಸಹಕಾರಿ ಯಾಗಿದೆ ಎಂದರು.
ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರಕಾಶ್ ಬಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಗಳ ಅಭಿವೃದ್ಧಿ ಯಲ್ಲಿ ಎನ್ ಎಸ್ ಶಿಬಿರಗಳು ಹೆಚ್ಚಿನ ಮಹತ್ವ ಹೊಂದಿರುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಶಿಬಿರದ ಮಹತ್ವವನ್ನು ತಿಳಿಸಿದರು
ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷಸುಕೇಶ್ ಹೆಗ್ಡೆ ಮಾತನಾಡಿ ಸೇವಾ ಮನೋ ಭಾವನೆ ಹಾಗೂ ಸಹಬಾಳ್ವೆ ಮೂಲಕ ಬದುಕು ಕಲಿಸಲು ಎನ್ ಎಸ್ ಎಸ್ ಸಹಕಾರಿ ಯಾಗಿದೆ ಎಂದು ಹೇಳಿದರು.
ಗ್ರಾ. .ಪಂ ಸದಸ್ಯ ದೇವೇಂದ್ರ ಕಾಮತ್ ಮಾತನಾಡಿದರು.ಎಳ್ೞಾರೆ ಜನಾರ್ದನ ಶಾಲೆ ಯ ಮುಖ್ಯೋಪಾದ್ಯಾಯಿನಿ ಅಶ್ವಿನಿ ಸುಕೇಶ್ ಹೆಗ್ಡೆ, ಎಸ್ ಎಸ್ ಅಧಿಕಾರಿ ದಿವ್ಯಾಕ್ಷ ಪ್ರಭು, ಸವಿತಾ ಕಾರಂತ್, ದೃತಿ ಗೌಡ, ಉಪಸ್ಥಿತರಿದ್ದರು.
ಶಿಬಿರಾರ್ಥಿ ದೀಕ್ಷಿತ್ ಪ್ರಾರ್ಥಿಸಿದರು . ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಎಸ್ ಎಸ್ ಅಧಿಕಾರಿ ಶ್ವೇತ ಧನ್ಯವಾದ ವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.