



ಗ್ಯಾಂಗ್: ನೀರಿನಲ್ಲೂ ದಾಳಿ ಮಾಡಿ ಶತ್ರುಸೈನ್ಯವನ್ನು ನಾಶಮಾಡಬಲ್ಲ ಅಣು ಸಾಮರ್ಥ್ಯದ ಅಂಡರ್ ವಾಟರ್ ಡ್ರೋನ್ `ಹೈಲ್’ (Haeil) ಪ್ರಯೋಗ ಯಶಸ್ವಿಯಾಗಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ.
ಈ ಮೂಲಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ-ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಉತ್ತರ ಕೊರಿಯಾದ ಪಶ್ಚಿಮ ಭಾಗದಲ್ಲಿ ಜಲಾಂತರ್ಗಾಮಿ ಮೂಲಕ ನ್ಯೂಕ್ಲಿಯರ್ ಡ್ರೋನ್ ಅನ್ನು 80 ರಿಂದ 150 ಮೀಟರ್ ನಷ್ಟು (260 ರಿಂದ 500 ಅಡಿ ಆಳ) ಸಾಗರದ ಆಳಕ್ಕೆ ಕಳುಹಿಸಲಾಗಿತ್ತು. ಸುಮಾರು 59 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಿತು ಎಂದು ತಿಳಿದುಬಂದಿದೆ.
ಹೈಲ್ ಡ್ರೋನ್ ಮೂಲಕ ಭಾರೀ ಸುನಾಮಿಯನ್ನೇ ಸೃಷ್ಟಿಸಿ ತೀರ ಪ್ರದೇಶದ ನೌಕಾನೆಲೆ, ಸಮುದ್ರದ ಮಧ್ಯೆ ಇರುವ ಶತ್ರುಸ್ಥಾವರಗಳನ್ನ ನಾಶ ಮಾಡುವ ಶಕ್ತಿಯೂ ತಮ್ಮ ದೇಶಕ್ಕೆ ಸಿದ್ಧಿಸಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.