



ಹೆಬ್ರಿ: ಅ.15 ರಂದು ಹೆಬ್ರಿ ಜೆಸಿಐ ವತಿಯಿಂದ ಹೆಬ್ರಿಯ ಅನಂತ ಪದ್ಮನಾಭ ಸನ್ನಿದಿ ಸಭಾಭವನ ವಲಯಾಧ್ಯಕ್ಷರ ಅಧಿಕೃತ ಭೇಟಿ - ಹೆಜ್ಜೆ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ಜೇಸಿಐ ನ ಅಧ್ಯಕ್ಷರಾದ HGF ರೂಪೇಶ್ ನಾಯ್ಕ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ರೋಯನ್ ಉದಯ್ ಕ್ರಾಸ್ತಾ ಮಾತನಾಡಿ ಹೆಬ್ರಿ ಜೇಸಿಐ ಈ ವರ್ಷದ ಉತ್ತಮ ಕಾರ್ಯಗಳನ್ನು ಮತ್ತು ವಲಯಕ್ಕೆ ನೀಡಿದ ಸಹಕಾರವನ್ನು ಕೊಂಡಾಡಿದರು ಅತಿಥಿಗಳಾಗಿ ವಲಯ ಉಪಾಧ್ಯಕ್ಷರಾದ HGF ಹರೀಶ್ ಶೇಟ್, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ JFM ಮೋಹನ್ ನಕ್ರೆ HGF ಮಂಜುನಾಥ್ ಕೆ ಶಿವಪುರ, ಕಾರ್ಯದರ್ಶಿ ಜೇಸಿ ಅನಂತಪದ್ಮನಾಭ ನಾಯಕ್, ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಶ್ರೀಕಾಂತ್ ಆಚಾರ್ಯ ಮಹಿಳಾ ಜೇಸಿ ಸಂಯೋಜಕಿ ಜೇಸಿ ಅಕ್ಷತಾ ರೂಪೇಶ್ ಯುವಜೇಸಿ ಅಧ್ಯಕ್ಷೆ JJC ಅವನಿ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸಭಾ ಕಾರ್ಯಕ್ರಮಕ್ಕೆ ಮೊದಲು ಜೇಸಿಐ ಹೆಬ್ರಿಯ ಈ ವರ್ಷದ ಶಾಶ್ವತ ಕೊಡುಗೆಯಾಗಿ ರಸ್ತೆ ಸುರಕ್ಷತಾ ಫಲಕವನ್ನು ಕಡ್ತಲದಲ್ಲಿ ವಲಯಾಧ್ಯಕ್ಷರು ಲೋಕಾರ್ಪಣೆ ಮಾಡಿದರು ಹಾಗೂ ದರ್ಬುಜೆ ಮತ್ತು ಚೆನ್ನಿಬೆಟ್ಟು ಅಂಗನವಾಡಿ ಕೇಂದ್ರಕ್ಕೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು, ಈ ಸಂದರ್ಭದಲ್ಲಿ ಕಡ್ತಲ ಗ್ರಾಮಪಂಚಾಯತ್ ನ ನಿಕಟಪೂರ್ವ ಅದ್ಯಕ್ಷರಾದ ಅರುಣ್ ಕುಮಾರ್ ಹೆಗ್ಡೆ, ಸದಸ್ಯರಾದ ಸುಕೇಶ್ ಹೆಗ್ಡೆ, ಸುನಿಲ್ ಹೆಗ್ಡೆ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು
ವಲಯಾಧ್ಯಕ್ಷರೊಂದಿಗೆ ಸಾಮಾನ್ಯ ಸಭೆ ನಡೆಸಿ ಚರ್ಚಿಸಲಾಯಿತು, 2022-23ನೇ ಸಾಲಿನ ಕಾರ್ಯಕ್ರಮಗಳ ವರದಿಯನ್ನು ವಲಯಾದ್ಯಕ್ಷರಿಗೆ ಒಪ್ಪಿಸಲಾಯಿತು ಈ :ಸಂದರ್ಭದಲ್ಲಿ ವಲಯಾಧ್ಯಕ್ಷರನ್ನು ಮತ್ತು ಅತಿಥಿಗಳನ್ನು ಹೆಬ್ರಿ ಜೇಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಪೂರ್ವಧ್ಯಕ್ಷರಾದ ಜೇಸಿ ಪ್ರಸಾದ್ ಶೆಟ್ಟಿ ವೇದಿಕೆಗೆ ಆಹ್ವಾನಿಸಿದರು ಘಟಕಾಧ್ಯಕ್ಷರಾದ ರೂಪೇಶ್ ನಾಯ್ಕ್ ಸ್ವಾಗತಿಸಿ ನಿರೂಪಿಸಿದರು ಕಾರ್ಯದರ್ಶಿ ವಂದಿಸಿದರು ಎಲ್ಲಾ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.