



ಕಾರ್ಕಳ : ಇರ್ಟಿಗಾ ವಾಹನವೊಂದು ಗದ್ದೆಗೆ ಉರುಳಿದ ಘಟನೆ ಕಾರ್ಕಳ ತಾಲೂಕಿನ ಮರ್ಣೆಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ಪಡ್ಡೆಲುಮಾರು ಎಂಬಲ್ಲಿ ಗದ್ದೆಗೆ ಉರುಳಿದ ಘಟನೆ ಜುಲೈ 10 ರಂದು ನಡೆದಿದೆ . ಚಾಲಕ ಅಪಾಯದಿಂದ ಪಾರಾಗಿದ್ದಾರೆ . ಅಜೆಕಾರಿನ ಉದ್ಯಮಿಯೊರ್ವರಿಗೆ ಸೇರಿದ ವಾಹನವಾಗಿದ್ದು ಕಾರ್ಕಳ ದಿಂದ ಅಜೆಕಾರಿಗೆ ಸಾಗುತಿತ್ತು. ಧಾರಾಕಾರವಾಗಿ ಸುರಿಯುತಿದ್ದ ಮಳೆಗೆ ಗಮನಿಸದೆ ಗದ್ದೆಗೆ ಉರುಳಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಅಪಾಯಕಾರಿ ತಿರುವು : ಪಡ್ಡೆಲುಮಾರು ತಿರುವು ಅಪಾಯಕಾರಿ ಯಾಗಿ ಪರಿಣಮಿಸಿದ್ದು ಕೆಲವು ವರ್ಷಗಳ ಹಿಂದೆ ಸರಣಿ ಅಪಘಾತ ಗಳುನಡೆದಿವೆ ಆದರೆ ಕಳೆದೆರಡು ವರ್ಷಗಳ ಹಿಂದೆ ಸುಮಾರು ಒಂದು ಕೋಟಿ ವೆಚ್ಚದ ಲ್ಲಿ ರಸ್ತೆಯನ್ನು ಅಗಲೀಕರಣ ಗೊಳಿಸಲಾಗಿದ್ದು ಅಪಘಾತ ಗಳು ಸಂಖ್ಯೆ ಕಡಿಮೆಯಾಗಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.