



ಬೆಂಗಳೂರು : ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸುವ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿ ಸಂಸ್ಥೆ ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ (Ola Layoffs) ಎನ್ನುವಂತಹ ಸುದ್ದಿ ಬಂದಿದೆ. ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆ ವರದಿ ಪ್ರಕಾರ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ವಿವಿಧ ವಿಭಾಗಗಳಲ್ಲಿನ ಉದ್ಯೋಗಿಗಳ ಲೇ ಆಫ್ ಆಗುತ್ತಿದೆಯಾದರೂ, ಪ್ರಮುಖವಾಗಿ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್, ಕಸ್ಟಮರ್ ರಿಲೇಶನ್ಸ್, ಪ್ರೊಕ್ಯೂರ್ಮೆಂಟ್, ಫುಲ್ಫಿಲ್ಮೆಂಟ್ ವಿಭಾಗಗಳಲ್ಲಿ ಹೆಚ್ಚಿನ ಲೇ ಆಫ್ ಆಗುತ್ತಿದೆ ಎನ್ನಲಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ಓಲಾದಲ್ಲಿ ನಡೆಯುತ್ತಿರುವ ಎರಡನೇ ಲೇ ಆಫ್ ಇದು. 2024ರ ನವೆಂಬರ್ನಲ್ಲಿ 500 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. 2024ರ ಮಾರ್ಚ್ 31ರಲ್ಲಿ ಓಲಾ ಸಂಸ್ಥೆಯಲ್ಲಿ 4,000 ಮಂದಿ ಉದ್ಯೋಗಿಗಳಿದ್ದರು. ಇದರಲ್ಲಿ ಗುತ್ತಿಗೆ ನೌಕರರೂ ಒಳಗೊಂಡಿದ್ದಾರೆ. ಅಲ್ಲಿಂದೀಚೆ ಒಂದೂವರೆ ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.