



ನವದೆಹಲಿ: ಒಮಿಕ್ರಾನ್ ಸೇರಿದಂತೆ ಹಲವು ರೂಪಾಂತರಿಗಳು ಭಾರತದ ತಲೆನೋವು ಹೆಚ್ಚಿಸಿತ್ತು. ಇದೀಗ ಈ ಆತಂಕವನ್ನೂ ಭಾರತ ನಿವಾರಿಸಿದೆ. ಇದೀಗ ಒಮಿಕ್ರಾನ್ ವೇರಿಯೆಂಟ್ ವಿರುದ್ಧ ಹೋರಾಡಬಲ್ಲ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಓಮಿಕ್ರಾನ್ ಹಾಗೂ ಕೋವಿಡ್ ವಿರುದ್ದ ಶಕ್ತಿಯುತವಾಗಿ ಹೋರಾಡಬಲ್ಲ mRNA ಬೂಸ್ಟರ್ ಡೋಸ್ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಈ ಲಸಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನೂತನ ಲಸಿಕೆಯನ್ನು GEMCOVAC-OM ಜೈವಿಕ ತಂತ್ರಜ್ಞಾನ ಇಲಾಖೆ, ಬಯೋಟೆಕ್ನಾಲಜಿ ರಿಸರ್ಚ್ ಕೌನ್ಸಿಲ್(BIRAC) ಸಹಯೋಗದಿಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಭಾರತ ಮೊದಲ mRNA ಲಸಿಕೆಯಾಗಿದೆ. ಹೊಸ ಒಮಿಕ್ರಾನ್ ಲಸಿಕೆಗೆ ಭಾರತದ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆ ನೀಡಿದೆ. ತುರ್ತುು ಬಳಕೆಗೆ DCGI ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.