logo
WhatsApp Image 2026-04-02 at 14.46.04.jpeg
hindalco everlast.jpeg

** ಸೆ.7 ರಂದು ಹಿರಿಯಡ್ಕದಲ್ಲಿ “ಸಪ್ತಪದಿ ವಧು–ವರ ಅನ್ವೇಷಣೆ – 2025 ಕಾರ್ಯಕ್ರಮ ”**

ಟ್ರೆಂಡಿಂಗ್
share whatsappshare facebookshare telegram
4 Sept 2025
post image

ಹಿರಿಯಡ್ಕ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಹಿರಿಯಡ್ಕ ಇವರ ಮುಂದಾಳತ್ವದಲ್ಲಿ, RSB & BGSB ಸಪ್ತಪದಿ ವಿವಾಹ ಮಾಹಿತಿ ಕೇಂದ್ರ, ಬೆಂಗಳೂರು ಇವರ ಆಯೋಜನೆಯಲ್ಲಿ “ಸಪ್ತಪದಿ ವಧು–ವರ ಅನ್ವೇಷಣೆ – 2025” ಕಾರ್ಯಕ್ರಮವು ಸೆಪ್ಟೆಂಬರ್ 7ರಂದು (ಆದಿತ್ಯವಾರ) ಬೆಳಗ್ಗೆ 9 ಗಂಟೆಯಿಂದ ಶಿವಪುರ ಸುಬ್ಬಣ್ಣನಾಯಕ್ ಸಾರಸ್ವತ ಸಭಾ ಭವನ, ಓಂತಿಬೆಟ್ಟು, ಹಿರಿಯಡ್ಕದಲ್ಲಿ ನಡೆಯಲಿದೆ.

ಸಮಾಜದ ವಿವಾಹಾಪೇಕ್ಷಿ ವಧು–ವರರಿಗೆ ಪರಸ್ಪರ ಪರಿಚಯ ಹಾಗೂ ಮಾಹಿತಿಗಳ ವಿನಿಮಯಕ್ಕಾಗಿ ವೇದಿಕೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ನೋಂದಾವಣಾ ಅರ್ಜಿ 2 ಪ್ರತಿಗಳು ಹಾಗೂ 2 postcard ಗಾತ್ರದ ಭಾವಚಿತ್ರಗಳನ್ನು ಸಲ್ಲಿಸುವುದು ಕಡ್ಡಾಯ. ವಧು–ವರರ ಪೋಷಕರು ಕಡ್ಡಾಯವಾಗಿ ಹಾಜರಿರಬೇಕೆಂದು ಸಂಘದವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಹಾ, ತಿಂಡಿ ಹಾಗೂ ಊಟದ ವ್ಯವಸ್ಥೆಯೂ ಕಲ್ಪಿಸಲಾಗಿದೆ.

ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರು:

  • ಪ್ರತಿಮಾ ಪ್ರಭು ಕೋಂಟು – 9480566541

  • ಮೋಹನ್ ನಾಯಕ್ ಶಿವಮೊಗ್ಗ – 9482736447

  • ಶಿವರಾಮ್ ಪ್ರಭು ಆತ್ರಾಡಿ – 9448724073

  • ಸುನೀಲ್ ಬೋರ್ಕರ್ ಪುತ್ತೂರು – 9686914639

  • ಸರೋಜಿನಿ ಪ್ರಭು ಕೋಡಿಬೆಟ್ಟು – 9663394650

  • ಎಂ. ಡಿ. ಪ್ರಭು ಬೆಂಗಳೂರು – 7019976058

  • ಹರಿದಾಸ್ ಕಾಮತ್ ಕಾಂಥರಗುಂಡಿ – 9481748552

  • ಶ್ರೀನಿಧಿ ಓಂತಿಬೆಟ್ಟು – 8277403845

  • ಮೇಘ ನಾಗರಾಜ್ ನಾಯಕ್ ಕಾಜರಗುತ್ತು – 7676822949

ವಿ.ಸೂ.: ಭಾಗವಹಿಸುವವರು ಫೋಟೋ ಹೊಂದಿರುವ ಬಯೋಡೇಟಾವನ್ನು ನೋಂದಾವಣಾ ಅಧಿಕಾರಿಗಳಿಗೆ WhatsApp ಮುಖಾಂತರ ಕಳುಹಿಸಿ ನೋಂದಾವಣೆ ಖಚಿತಪಡಿಸಿಕೊಳ್ಳಬೇಕು. ನೋಂದಾವಣೆಯನ್ನು ಪರಿಚಿತ ಅಧಿಕಾರಿಯ ಮೂಲಕವೇ ಮಾಡಿಕೊಳ್ಳಬೇಕು, ಪ್ರತಿಯೊಬ್ಬರಿಗೂ ಕರೆ ಮಾಡುವ ಅವಶ್ಯಕತೆಯಿಲ್ಲ ಎಂದು ಹಿರಿಯಡ್ಕ ರಾಜಾಪುರ ಸಾರಸ್ವತ ಬ್ರಾಹ್ಮಣಸಂಘ ಪ್ರಕಟಣೆಯಲ್ಲಿ ತಿಳಿಸಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.