logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

"ಒಂದು ಹೆಜ್ಜೆ, ಹೊಸ ಆರಂಭ: ನಮ್ಮ ಹೊಸ ಪ್ರಯಾಣ!"

ಟ್ರೆಂಡಿಂಗ್
share whatsappshare facebookshare telegram
1 Jan 2025
post image

ಕೆಲವೊಮ್ಮೆ ಯೋಚನಾ ಶೈಲಿಗಳು ಬದಲಾಗುತ್ತವೆ ಅಲ್ವಾ ಅದರಲ್ಲೂ ಕ್ಯಾಲೆಂಡರ್ ಬದಲಾಗುತ್ತಿದೆಯೇ ಹೊರತು ನಾವಲ್ಲ, ನಮ್ಮ ಆಲೋಚನೆಗಳಲ್ಲ ಎಂದು. ಪ್ರತಿವರ್ಷ ನೂತನ ವರ್ಷಕ್ಕೆ ಹೊಸ ತರಹದ ಬದಲಾವಣೆ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಆಶಯ. ಆದರೆ ಅವುಗಳು ಕಾರ್ಯ ರೂಪಕ್ಕೆ ಬರುವುದು ಅತಿ ವಿರಳ ಎನ್ನಬಹುದು. ಯಾಕೆ ಹೀಗೆ ಎನ್ನುವ ಪ್ರಶ್ನೆ ಅದೆಷ್ಟೋ ಬಾರಿ ಉಮ್ಮಳಿಸಿರುವುದು ಇದೆ. ಕಾರಣ ಬೇರೆ ಇರಲು ಸಾಧ್ಯವೇ ಇಲ್ಲ ಎಲ್ಲವೂ ನಮ್ಮಿಂದಲೇ . ಪ್ರಯತ್ನಗಳು ಸರಿಯಾದ ರೀತಿಯಲ್ಲಿ ಇದ್ದಾಗ ಯಶಸ್ಸು ಕಾಣಬಹುದು. ನಮ್ಮ ಪ್ರತಿ ಹೆಜ್ಜೆಯೂ ನಮ್ಮ ಮುಂದಿನ ಹಾದಿಯ ಒಂದು ಪ್ರಮುಖ ಭಾಗವಾಗಿರುತ್ತದೆ. ನಾವು ಈ ಹಿಂದಿನ ಅನುಭವಗಳಿಂದ ಕಲಿತ ಪಾಠಗಳನ್ನು ಅರಿತುಕೊಂಡು , ನೂತನ ವರ್ಷದಲ್ಲಿ ವಿಭಿನ್ನ ಆಲೋಚನೆಯೊಂದಿಗೆ ಮತ್ತೊಂದು ಹೆಜ್ಜೆ ಇಡಬೇಕು. ಎಷ್ಟೋ ಜನರ ಬಾಯಲ್ಲಿ ಹೊಸ ವರ್ಷ ಎಂದಾಗ ಬರುವ ಮಾತು "ಏನ್ ಹೊಸ ವರ್ಷನೋ ಏನೋ ನಮ್‌ ಲೈಪ್‌ಲ್ಲಿ ಕ್ಯಾಲೆಂಡರ್‌ ಚೆಂಚ್‌ ಆಗ್ತಾ ಇದೆ ಬಿಟ್ರೆ ಹೊಸತೇನು ಇಲ್ಲ " ಇಂತಹ ಮಾತುಗಳು ಸೋತಾಗ, ಪ್ರಯತ್ನಗಳು ನಿಂತಾಗ ಅಥವಾ ವಿಫಲವಾದಾಗ ಬರುವಂತದ್ದು. ಪ್ರಯತ್ನ ಸೋತಿರಬಹುದು ಹಾಗೆಂದು ಆಸೆ ಕನಸು ಸತ್ತಿಲ್ಲ ಅಲ್ಲವೇ ಹಾಗಿರುವಾಗ ಪುನಃ ಪುನಃ ಪ್ರಯತ್ನಿಸುವುದರಲ್ಲಿ ತಪ್ಪೇನು , ಇದರಿಂದ ಕಳೆದುಕೊಳ್ಳುವುದು ಏನು ಇಲ್ಲ ಬದಲಾಗಿ ಕಲಿಯುತ್ತೀರಿ. ಹೊಸ ವರ್ಷಕ್ಕೆ ಕನಸುಗಳನ್ನ ನನಸಾಗಿಸೋಕೆ ಯಾವ ರೀತಿ ಯೋಜನೆಗಳನ್ನ ಹಾಕಿಕೊಳ್ಳಬೇಕು ಎಂದು ಯೋಚಿಸಿ. ಶ್ರಮ ಇದ್ದಾಗ ಯಶಸ್ಸು ತನ್ನಿಂದ ತಾನೆ ಬರುವುದಂತೆ. ಕನಸ್ಸನ್ನು ಕಾಣುವುದು ತಪ್ಪಲ್ಲ ಆದರೆ ಅದನ್ನು ನನಸಾಗಿಸದೆ ಉಳಿಸುವುದು ತಪ್ಪು ಅಂತಹ ತಪ್ಪು ನೂತನ ವರ್ಷಗಳಲ್ಲಿ ಆಗದೇ ಇರಲಿ. ಏನನ್ನಾದರೂ ಸಾಧಿಸುವ ಮುನ್ನ ಇರಬೇಕಾದದ್ದು ಆತ್ಮಸ್ಥೈರ್ಯ ಹಾಗೆಯೇ ಉತ್ತಮ ಆರೋಗ್ಯ. ಇತ್ತೀಚಿನ ಆಹಾರಗಳಲ್ಲಿ ಪೌಷ್ಟಿಕ ಅಂಶಕ್ಕಿಂತ ಆರೋಗ್ಯವನ್ನು ಹಾಳು ಮಾಡುವಂತಹ ಅಂಶವೇ ಹೆಚ್ಚು.ಹಾಗಾಗಿ ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುವ ಅಭ್ಯಾಸ ರೂಡಿಸಿಕೊಂಡು, ಹೊಸ ವರ್ಷದ ಹೊಸ ಸಂಕಲ್ಪಗಳಲ್ಲಿ ಆರೋಗ್ಯ ಹಾಗೂ ಆಹಾರದ ವಿಷಯವನ್ನು ಸೇರಿಸಿಕೊಳ್ಳಿ. ಆಹಾರ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ ಆರೋಗ್ಯ ಚೆನ್ನಾಗಿದ್ದರೆ ಆಲೋಚನೆಗಳು ಉತ್ತಮವಾಗಿರುತ್ತದೆ. ನಮ್ಮ ಜೀವನದಲ್ಲಿ ಸಕರಾತ್ಮಕ ಬದಲಾವಣೆಗಳನ್ನು ಮಾಡಲು ಸಣ್ಣ ಸಣ್ಣ ಸಂಕಲ್ಪಗಳನ್ನು ಇಟ್ಟುಕೊಳ್ಳಬೇಕು. ಹಾಗೆಯೇ ಹೊಸತನ್ನು ಕಲಿಯುವ ಹುರುಪು, ಸಮಯದ ಮೌಲ್ಯವು ಇರಬೇಕು. ಯಾವುದೇ ಯೋಜನೆಯನ್ನು ಮಾಡುವಾಗ ಹೆಚ್ಚು ಸಮಯವಿಲ್ಲ ಎಂಬಂತೆ ಕಾರ್ಯನಿರತರಾಗಬೇಕು. ಹೆಚ್ಚು ಸಮಯವಿದೆ, ದಿನಕಳೆಯಲಿ, ಮಾಡಿದರಾಯಿತು ಎನ್ನುವ ಮನೋಭಾವನೆ ಇದ್ದರೆ ಯಶಸ್ಸು ನಿಮ್ಮದಾಗದು. ನೂತನ ವರ್ಷದಲ್ಲಿ ನೀವು ಇಡುವ ಪ್ರತಿ ಹೆಜ್ಜೆಯೂ ಯಶಸ್ಸಿನ ಮೆಟ್ಟಿಲನ್ನೇರಲಿ. ಹೊಸ ವರ್ಷದ ಶುಭಾಶಯಗಳು.

ಅನುಪಮ ಶಿರಿಯಾರ ಆಳ್ವಾಸ್ (ಸ್ವಾಯತ್ತ )ಕಾಲೇಜು ಮೂಡುಬಿದಿರೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.