



ನವದೆಹಲಿ: ಒನ್ ಪ್ಲಸ್ ಕಂಪನಿ ಭಾರತದಲ್ಲಿ ಎರಡು ಬಹುನಿರೀಕ್ಷಿತ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಒನ್ ಪ್ಲಸ್ ನಾರ್ಡ್ 3 5G ಮತ್ತು ಒನ್ ಪ್ಲಸ್ ನಾರ್ಡ್ CE 3 5G ಎಂಬ ಎರಡು ಫೋನನ್ನು ಕಂಪನಿ ದೇಶದಲ್ಲಿ ಅನಾವರಣಗೊಳಿಸಿದೆ.
ಈ ಎರಡೂ ಫೋನ್ನಲ್ಲಿ ಆಕರ್ಷಕ ಫೀಚರ್ಗಳನ್ನು ನೀಡಲಾಗಿದ್ದು, ಮಧ್ಯಮ ಬೆಲೆಗೆ ಲಭ್ಯವಿದೆ. ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸೇರಿದಂತೆ ಎಲ್ಲ ಆಯ್ಕೆ ಬೆಲೆಗೆ ತಕ್ಕಂತೆ ನೀಡಲಾಗಿದೆ.
ಒನ್ ಪ್ಲಸ್ ನಾರ್ಡ್ 3 5G ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ವೇರಿಯೆಂಟ್ಗೆ 33,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 16GB RAM + 256GB ಸ್ಟೋರೇಜ್ ರೂಪಾಂತರಕ್ಕೆ 37,999 ರೂ. ಇದೆ. ಇದು ಜುಲೈ 15 ರಿಂದ ಅಮೆಜಾನ್ನಲ್ಲಿ ಖರೀದಿಗೆ ಸಿಗಲಿದೆ. ಅಮೆಜಾನ್ ಪ್ರೈಮ್ ಡೇ ಸೇಲ್ನಲ್ಲಿ ಮಾರಾಟ ಕಾಣಲಿದೆ.
ಒನ್ ಪ್ಲಸ್ ನಾರ್ಡ್ CE 3 5G ಸ್ಮಾರ್ಟ್ಫೋನ್ ಕೂಡ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ವೇರಿಯೆಂಟ್ಗೆ 26,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 28,999 ರೂ. ಇದೆ. ಈ ಫೋನ್ ಆಗಸ್ಟ್ನಲ್ಲಿ ಮಾರಾಟ ಕಾಣಲಿದೆ ಎಂದು ಕಂಪನಿ ಹೇಳಿದೆ. . ಈ ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಒನ್ ಪ್ಲಸ್ ಹೊಸ ಒನ್ಪ್ಲಸ್ ನಾರ್ಡ್ ಬರ್ಡ್ಸ್ 2r ಅನ್ನು 2,199 ರೂ. ಗೆ ಬಿಡುಗಡೆ ಮಾಡಲಾಗಿದೆ. ಇದು 12.4mm ಡ್ರೈವರ್ಸ್, ಡ್ಯುಯಲ್ ಮೈಕ್‌ಗಳು ಮತ್ತು ಹೊರಗಿನ ಶಬ್ದವನ್ನು ಫಿಲ್ಟರ್ ಮಾಡುವ ಹಾಗೂ ಧ್ವನಿಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ‘AI- ಕ್ಲಿಯರ್ ಕಾಲ್ ಅಲ್ಗಾರಿದಮ್’ ನಿಂದ ಚಾಲಿತವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.