logo
WhatsApp Image 2026-04-02 at 14.46.04.jpeg
hindalco everlast.jpeg

ಒಂದೇ ವಾರದಲ್ಲಿ ಈರುಳ್ಳಿ ದರ 48% ಏರಿಕೆ

ಟ್ರೆಂಡಿಂಗ್
share whatsappshare facebookshare telegram
13 Aug 2023
post image

: ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಲ್ಲಿ ಕ್ವಿಂಟಾಲ್‌ ಈರುಳ್ಳಿ ದರ ಶೇ. 48ರಷ್ಟು ಏರಿಕೆ ಕಂಡಿದೆ. ಟೊಮ್ಯಾಟೋ ದರ ಇಳಿಕೆ ಕಂಡ ಕೆಲವೇ ದಿನಗಳಲ್ಲಿ ಲಾಸಲ್‌ ಗಾಂವ್ ಎಪಿಎಂಸಿಯಲ್ಲಿ ಈರುಳ್ಳಿಯ ಸಗಟು ಬೆಲೆ ಹೆಚ್ಚಳವಾಗಿದೆ.

ಆಗಸ್ಟ್ 4 ರಂದು ಕ್ವಿಂಟಲ್‌’ಗೆ 1,550 ರೂ. ಇದ್ದ ದರ ಶುಕ್ರವಾರ 2,300 ರೂ.ಗೆ ತಲುಪಿದೆ. ಕಳೆದ ಎಂಟು ತಿಂಗಳಲ್ಲಿ ದಾಖಲಾದ ಈರುಳ್ಳಿಯ ಗರಿಷ್ಠ ಸಗಟು ದರ ಇದಾಗಿದೆ. ಕಳೆದ ಡಿಸೆಂಬರ್‌ ನಲ್ಲಿ ಕೊನೆಯದಾಗಿ ಕ್ವಿಂಟಲ್‌ ಈರುಳ್ಳಿ ದರ 2,311 ರೂ.ಗೆ ತಲುಪಿತ್ತು.

ರೈತರು ಖಾರಿಫ್ ಬಿತ್ತನೆ ಚಟುವಟಿಕೆಯಲ್ಲಿ ನಿರತರಾಗಿರುವ ಕಾರಣ ಲಾಸಲ್‌ ಗಾಂವ್‌ ಮಾರುಕಟ್ಟೆಗೆ ಈರುಳ್ಳಿ ಬರುವುದೂ ಕಡಿಮೆಯಾಗಿದೆ. ದಿನಕ್ಕೆ 20,000 – 25,000 ಕ್ವಿಂಟಾಲ್‌ ಬರುತ್ತಿದ್ದ ಈರುಳ್ಳಿ ಇದೀಗ 15,000 ಕ್ವಿಂಟಾಲ್‌’ಗೆ ಕುಸಿದಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.