logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಅದೃಷ್ಟವಂತರು, ಪುಣ್ಯವಂತರು, ಭಾಗ್ಯವಂತರು ಮಾತ್ರ ಶಿಕ್ಷಕರಾಗುತ್ತಾರೆ - ಕಮಲಾಕ್ಷ ಕಾಮತ್‌

ಟ್ರೆಂಡಿಂಗ್
share whatsappshare facebookshare telegram
5 Sept 2022
post image

ಕಾರ್ಕಳ : ಮನುಷ್ಯನಿಗೆ ತಂದೆ ತಾಯಿ ಜನ್ಮ ನೀಡಿದರೆ ಶಿಕ್ಷಕರು ವಿದ್ಯೆ ಬುದ್ಧಿ ನೀಡಿ ದಾರಿ ತೋರುತ್ತಾರೆ. ಅಂತರಾತ್ಮದ ಅಗಾಧ ಶಕ್ತಿಯೊಂದಿಗೆ ಮನುಷ್ಯ ಜೀವನ ಬೆಳಗುವವರು ಶಿಕ್ಷಕರು ಎಂದು ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕ್‌ನ ಮುಖ್ಯ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್‌ ಹೇಳಿದರು. ಅವರು ಸೋಮವಾರ ಕಾರ್ಕಳದ ಸುಮೇಧಾ ಫ್ಯಾಶನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುವನ್ನು ಗೌರವದಿಂದ ಕಾಣಬೇಕು. ಅವರು ಕಲಿಸಿದ ವಿದ್ಯೆಯಿಂದ ನಾವು ಸಮಾಜದಲ್ಲಿ ಒಂದು ಸ್ಥಾನ ಪಡೆಯಲು ಸಾಧ್ಯವಾಗುವುದು. ಅದೃಷ್ಟವಂತರು, ಪುಣ್ಯವಂತರು, ಭಾಗ್ಯವಂತರು ಮಾತ್ರ ಶಿಕ್ಷಕರಾಗುತ್ತಾರೆ ಎಂದವರು ಬಣ್ಣಿಸಿದರು. ಶಿಕ್ಷಕರನ್ನು ಆದರಿಸಿ, ಸತ್ಕರಿಸಿ, ಪೂಜಿಸುವ ಕೆಲಸವಿಂದು ಆಗಬೇಕಿದೆ ಎಂದು ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡುವವರಲ್ಲ. ತನ್ನ ಪರಿಶ್ರಮ, ತ್ಯಾಗ ಸ್ಮರಿಸುವಂತದ್ದು. ಹಾಗಾಗಿ ದೇವರು ಅವರಿಗೆ ಸರ್ವಸ್ವವನ್ನು ಕರುಣಿಸುತ್ತಾನೆ. ನಾವು ಮೊದಲು ಮಾನವರಾಗಬೇಕು. ನಾವು ಜಗತ್ತಿಗೆ ಒಳ್ಳೆಯರಾದರೆ ಜಗತ್ತು ನಮ್ಮನ್ನು ಸ್ನೇಹ ಪ್ರೀತಿಯಿಂದ ನೋಡಿಕೊಳ್ಳುತ್ತದೆ. ನಾವು ಯಾರ ಮೆಲೂ ಅವಲಂಬಿತರಾಗದೇ ಕೇವಲ ದೇವರ ಮೇಲೆ ಅಲವಂಬಿತರಾಗಬೇಕೆಂದು ಅಭಿಪ್ರಾಯಪಟ್ಟರು. ಭುವನೇಂದ್ರ ಶಾಲೆಯ ಶಿಕ್ಷಕಿ ಸೀಮಾ ಕಾಮತ್‌ ಮಾತನಾಡಿ, ಮನುಷ್ಯ ಯಾವತ್ತೂ ನಿರ್ದಿಷ್ಟ ಗುರಿ ಹೊಂದಿ, ಆ ಗುರಿಯನ್ನು ಮುಟ್ಟುವ ಛಲ, ಆತ್ಮಸ್ಥೈರ್ಯ ಮೈಗೂಡಿಸಿಕೊಳ್ಳಬೇಕೆಂದರು. ಗುರಿಯನ್ನು ಏರುವ ಸಂಕಲ್ಪ ಒಳ್ಳೆಯ ಮೌಲ್ಯಯುತ ಶಿಕ್ಷಣವನ್ನು ಪಡೆದಾಗ ಮಾತ್ರ ಸಾಧಿಸಲು ಸಾಧ್ಯ. ಸಾಧನೆಯ ಛಲವೊಂದಿದ್ದರೆ, ಏನನ್ನೂ ಸಾಧಿಸಬಹುದು. ಗುರುಹಿರಿಯರನ್ನು ಗೌರವಿಸುವ ಮೂಲಕ ಅವರ ಸ್ಪೂರ್ತಿ, ಪ್ರೇರಣೆ ಪಡೆಯಬಹುದಾಗಿದೆ.

ಈ ಸಂದರ್ಭದಲ್ಲಿ ಸೀಮಾ ಕಾಮತ್‌ ಹಾಗೂ ಕಮಲಾಕ್ಷ ಕಾಮತ್‌ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸುಮೇಧಾ ಫ್ಯಾಶನ್‌ ಇನ್‌ಸ್ಟಿಟ್ಯೂಟ್‌ನ ಸಂಚಾಲಕಿ ಸಾಧನ ಆಶ್ರಿತ್‌, ಸಹನಾ, ಪುಷ್ಪಾ ಆಚಾರ್ಯ, ಸುಪ್ರಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಪತ್ರಕರ್ತರ ಸಂಘದ ಅ‍ಧ್ಯಕ್ಷ ಮೊಹಮ್ಮದ್‌ ಶರೀಫ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾದಂಬರಿ ಸ್ವಾಗತಿಸಿ, ಸ್ನೇಹಾ ಕಾರ್ಯಕ್ರಮ ನಿರೂಪಿಸಿ, ಶ್ರೀದೇವಿ ವಂದಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.