



ಕಾರ್ಕಳ; ರಾಜಪುರ ಸಾರಸ್ವತ ಸಂಘ,ಕಾರ್ಕಳ ಮಹಾಲಕ್ಷ್ಮಿ ದೇವಸ್ಥಾನ ಆಡಳಿತ ಮಂಡಳಿ, ರೋಟರಿಕ್ಲಬ್ ಕಾರ್ಕಳ, ರಕ್ತನಿಧಿ ಮಣಿಪಾಲ್ ಜಂಟಿ ಆಶ್ರಯ ದಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಶಿವಾನಂದ ಸರಸ್ವತಿ ಸಭಾಭವನದಲ್ಲಿ ನಡೆಯಿತು. ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಮೊಕ್ತೆಸರ ಅಶೋಕ ನಾಯಕ್ ಅಧ್ಯಕ್ಷ ತೆ ವಹಿಸಿದ್ದರು. ರಕ್ತದಾನಿ ದೇವದಾಸ್ ಪಾಟ್ಕರ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ ಅಶ್ವಿನ್ ರಕ್ತನಿಧಿ ಮಣಿಪಾಲ್ ರಕ್ತದಾನದ ಮಹತ್ವ ವಿವರಿಸಿದರು .ರೋಟರಿ ಕ್ಲಬ್ ಅಧ್ಯಕ್ಷ ಕಾರ್ಕಳ ರೊ. ಸುರೇಶ್ ನಾಯಕ್ , ಕಾರ್ಕಳ ಎಸ್.ವಿ.ಟಿ ಪದವಿ ಕಾಲೇಜಿನ ಪ್ರಾಂಶುಪಾಲೆ ಉಷಾ ನಾಯಕ್. ಉಪಸ್ಥಿತರಿದ್ದರು. 65 ಬಾರಿ ರಕ್ತದಾನ ಮಾಡಿದ ರಕ್ತದಾನಿ ದೇವದಾಸ್ ಪಾಟ್ಕರ್ ಹಾಗೂ ಡಾ. ಅಶ್ವಿನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಕಳ ರಾಜಪುರ ಸಾರಾಸ್ವತ ಸಂಘದ ಅಧ್ಯಕ್ಷ ಸದಾಶಿವ ಪ್ರಭು ಪ್ರಸ್ತಾವಿಕ ಮಾತನಾಡಿದರು. ರೂಪೇಶ್ ನಾಯಕ್ ಸ್ವಾಗತಿಸಿದರು. ಬಾಲಕೃಷ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು ನಿತ್ಯಾನಂದ ನಾಯಕ್ ರಾಧಾಕೃಷ್ಣ ಭಟ್ ಧನ್ಯವಾದವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.