



ಮಣಿಪಾಲ:ಏಪ್ರಿಲ್ ತಿಂಗಳನ್ನು ವಿಶ್ವಾದ್ಯಂತ ಬಾಯಿಯ ಕ್ಯಾನ್ಸರ್ ಜಾಗ್ರತಿ ಕ್ಯಾನ್ಸರ್ ಮಾಸವನ್ನಾಗಿ ಆಚರಿಸಲಾಗುತ್ತದೆ. ಬಾಯಿಯ ಕ್ಯಾನ್ಸರ್ ನಿಮ್ಮ ಬಾಯಿಯ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಇದು ನಿಮ್ಮ ಒಸಡುಗಳು, ನಾಲಿಗೆ ಅಥವಾ ತುಟಿಗಳು ಸೇರಿದಂತೆ ಯಾವುದೇ ಅಂಗಾಂಶದ ಮೇಲೆ ಬೆಳೆಯಬಹುದು. ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯು ಗಮನಾರ್ಹವಾಗಿ ಫಲಿತಾಂಶಗಳನ್ನು ಸುಧಾರಿಸುತ್ತದೆ. ಇದರ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಏಪ್ರಿಲ್ 17ರಿಂದ 21ರವರೆಗೆ ಜಾಗೃತಿ, ಶಿಕ್ಷಣ ಮತ್ತು ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಇಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಏರ್ಪಡಿಸಲಾಗಿತ್ತು. ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು . ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ ಶೆಟ್ಟಿ ಮಾಹಿತಿ ಕರ ಪತ್ರ ಬಿಡುಗಡೆ ಮಾಡಿದರು.
ತಲೆ ಮತ್ತು ಕತ್ತಿನ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ದೇವರಾಜ್ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮುಖಾಂಗ ಅಥವಾ ಬಾಯಿ ಪ್ರಮುಖ ಅಂಗಗಳಲ್ಲಿ ಒಂದು. ನಾವು ಸೇವಿಸುವ ಪ್ರತೀ ಪದಾರ್ಥಗಳು ಬಾಯಿಯ ಮೂಲಕವೇ ದೇಹ ಸೇರುತ್ತದೆ. ಆದ್ದರಿಂದ ಬಾಯಿಯ ಆರೋಗ್ಯ ಕಾಪಾಡಿ ಕೊಳ್ಳುವುದು ಅತೀ ಮುಖ್ಯ . ತಂಬಾಕು ಸೇವನೆ, ಮದ್ಯ ಸೇವನೆ, ಗುಟ್ಕಾ ಸೇವನೆ ಇತ್ಯಾದಿಗಳು ಬಾಯಿಯ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದರು. ಅಲ್ಲದೇ ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದರಿಂದಾಗುವ ಪ್ರಯೋಜನದ ಕುರಿತು ಮಾತನಾಡಿದರು . ಶಿಬಿರವು ಪ್ರತೀ ದಿನ ಇಂದಿನಿಂದ ಏಪ್ರಿಲ್ 21ರತನಕ ಬೆಳೆಗ್ಗೆ 10.00ರಿಂದ ಮದ್ಯಾಹ್ನ 1.00ರ ತನಕ ನಡೆಯಲಿದೆ, ಇದರ ಪ್ರಯೋಜನವನ್ನು ಬಹುವಾಗಿ ಪಡೆದುಕೊಳ್ಳಬೇಕೆಂದು ಹೇಳಿದರು. ತಲೆ ಮತ್ತು ಕತ್ತಿನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ ಸುರೇಶ್ ಪಿಳ್ಳೈ ಸಹಾಯಕ ಪ್ರಾದ್ಯಾಪಕರಾದ, ಡಾ ಶಮಾ ಶೆಟ್ಟಿ, ಡಾ ಕಿಂಜಲ್ ಶಂಕರ್ ಮಜುಮ್ದಾರ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.