



ಸಂತೆಬೆನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ). ಸಂತೆಬೆನ್ನೂರು, ಯೋಜನಾ ಕಚೇರಿ ವ್ಯಾಪ್ತಿಯ ಬೆಂಕಿಕೆರೆ ವಲಯದ ಶೆಟ್ಟಿಹಳ್ಳಿ ಇದರ ಸಹಯೋಗ ದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಪ್ರಾಥಮಿಕ ಶಾಲೆ ಯ ಮುಖ್ಯೋಪಾಧ್ಯಾಯ ಬಸವರಾಜಪ್ಪ ಎಚ್ . ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಪರಿಸರವಿದ್ದರೆ ಮಾತ್ರ ಮನುಜ ಸೇರಿದಂತೆ ಇತರ ಜೀವಿಗಳು ಬದುಕಲು ಸಾಧ್ಯ. ಪರಿಸರ ವಿಲ್ಲದಿದ್ದರೆ ಜೀವಿಗಳಿಗೆ ಉಳಿಗಾಲವು ಇಲ್ಲ. ಪರಿಸರವನ್ನು ಸಂರಕ್ಷಿಸುವ ಕಾರ್ಯ ನಮ್ಮಿಂದವಾಗಬೇಕು . ಗಿಡನೆಟ್ಟು ಬರವನ್ನು ಅಟ್ಟಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಯೋಜನಾಧಿಕಾರಿ ರವಿಚಂದ್ರ ಮಾತನಾಡಿ ಪರಿಸರದ ಉಳಿಸಲು ಕೇವಲ ಗಿಡಗಳನ್ನು ನೆಟ್ಟರೆ ಮಾತ್ರ ಸಾಕಾಗದು ,ಅದರ ನಿರ್ವಹಣೆಯು ನಮ್ಮರಲ್ಲರ ಜವಾಬ್ದಾರಿಯಾಗಿದೆ. ಇದ್ದ ಗಿಡ ಮರಗಳನ್ನು ಕಡಿದು ಹಾಕದಂತೆ ರಕ್ಷಿಸೋಣ. ಎಂದರು. ಸಮಾರಂಭದಲ್ಲಿ ಶಾಲೆಯ ಸ್ಥಳಿಯ ಸ್ಥಾಯಿಸಮಿತಿಯ ಅಧ್ಯಕ್ಷ ಚಂದ್ರಶೇಖರ್ ., ಬಸವೇಶ್ವರ , ಒಕ್ಕೂಟದ ಉಪಾಧ್ಯಕ್ಷ ಭಾಗ್ಯಮ್ಮ , ಶಾಲಾ ಶಿಕ್ಷಕಿ ಮಾಲಿನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತಾಲೂಕು ಕೃಷಿ ಅಧಿಕಾರಿಯಾದ ರಾಜೇಂದ್ರ ಜಿ . ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಮಮತಾ ವಂದಿಸಿದರು. ಸೇವಾ ಪ್ರತಿನಿಧಿಯವರಾದ ಪವನ್ ರವರು ಮತ್ತು ಶಾಲಾ ವಿದ್ಯಾರ್ಥಿಗಳು ಒಕ್ಕೂಟದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿ ದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.