logo
WhatsApp Image 2026-04-02 at 14.46.04.jpeg
hindalco everlast.jpeg

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮ: ವಿದ್ವತ್ ಸ್ಪೂರ್ತಿ ಸಂಚಿಕೆಯ ಮೊದಲನೇ ಭಾಗದ ಅನಾವರಣ

ಟ್ರೆಂಡಿಂಗ್
share whatsappshare facebookshare telegram
10 Jul 2024
post image

ಗುರುವಾಯನಕೆರೆ: ಮಕ್ಕಳಿಗೆ ಸ್ಫೂರ್ತಿ ತುಂಬಿ ಓದಿನಡೆಗೆ ಹುರಿದುಂಬಿಸಿ, ಪಿಯುಸಿಯಲ್ಲಿಯೇ ಮಹತ್ತರವಾದುದ್ದನ್ನ ಸಾಧಿಸಿ, ಭವಿಷ್ಯ ರೂಪಿಸಿಕೊಳ್ಳುವ ದೃಷ್ಠಿಯಿಂದ ನಿನ್ನೆ ವಿದ್ವತ್ ಪಿಯು ಕಾಲೇಜಿನಲ್ಲಿ ಮಹತ್ವದ ಓರಿಯಂಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ವತ್ ಸ್ಫೂರ್ತಿ ಸಂಚಿಕೆಯ (Motivational Edition) ಮೊದಲನೇ ಭಾಗವಾದ ಈ ಕಾರ್ಯಕ್ರಮವನ್ನು ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಈ ಮಂಡಗಳಲೆ ಇವರು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗೆ ಓದುವ ವಿಧಾನ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ಕೆಲವು ವೈಜ್ಞಾನಿಕ ಸಲಹೆಗಳನ್ನೊಳಗೊಂಡಿದ್ದಲ್ಲದೇ, ಪಿಯು ಹಂತದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ವಿಸ್ತೃತ ಮಾಹಿತಿ, ಮಕ್ಕಳು ಸಾಧನೆ ಮಾಡುವ ಇಚ್ಛೆ ಇರುವವರು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ಪ್ರತಿದಿನದ ದಿನಚರಿ ಹೇಗಿರಬೇಕು, ಬೇಸಿಕ್ಸ್ ಗಳನ್ನು ಹೇಗೆ ವರ್ಕ್ ಮಾಡಿಕೊಳ್ಳಬೇಕು, ಮನೆಯ ಕಷ್ಟದ ಪರಿಸ್ಥಿತಿಯನ್ನು ಹೇಗೆ ತೆಗೆದುಕೊಳ್ಳಬೇಕು, ಕೊರತೆಯನ್ನೇ ಹೇಗೆ ಮೆಟ್ಟಿನಿಲ್ಲಬೇಕು, ಪೋಷಕರ ಆಸೆಗಳೇನಾಗಿರುತ್ತವೆ ಹಾಗೂ ಅವುಗಳನ್ನು ಹೇಗೆ ಗಂಭೀರವಾಗಿ ಪರಿಗಣಿಸಬೇಕು ಎಂಬಿತ್ಯಾದಿ ಸೂಕ್ಷ್ಮಗಳನ್ನು ಮನಮುಟ್ಟುವಂತೆ ಎಲ್ಲಾ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ವಿದ್ವತ್ ಪಿಯು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರತಾಪ್ ದೊಡ್ಡಮನಿಯವರು ವಿದ್ವತ್ ಕಾಲೇಜಿನ ಪರೀಕ್ಷಾ ಮಾದರಿ, ಕೌನ್ಸಲಿಂಗ್ ಮಾದರಿ ಹಾಗೂ ಸಾಧಕ ಮಾದರಿಯ ಸಮಗ್ರ ಮಾಹಿತಿ ನೀಡಿದರು.ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷರಾದ ಶ್ರೀ ಸುಭಾಶ್ವಂದ್ರ ಶೆಟ್ಟಿಯವರು ವಿದ್ವತ್ ಪ್ರತಿಷ್ಠಾನದ ಭವಿಷ್ಯದ ಕನಸನ್ನು ವ್ಯಕ್ತ ಪಡಿಸಿ, ಮಹತ್ವದ ಪಿಯು ಶಿಕ್ಷಣಕ್ಕೆ ವಿದ್ವತ್ ಕರ್ನಾಟಕದ ಮಹತ್ವಾಕಾಂಕ್ಷಿ ಮಕ್ಕಳಿಗೆ ಹೇಗೆ ವೇದಿಕೆಯಾಗಲಿದೆ ಎಂಬುದನ್ನು ತಿಳಿಸಿದರು.

ಪ್ರಾಂಶುಪಾಲರಾದ ಶ್ರೀ ಜಯೇಂದ್ರ ಬಂದ್ಯಾನ್ ವಿದ್ವತ್ ಡಿಜಿಟಲ್ ಪ್ಲಾಟ್ ಫಾರಂ ವಿದ್ವತ್ ಯುಟಿಲಿಟಿ ಆ್ಯಪ್ ನ್ನು ಪರಿಚಯಿಸಿದರು. ವಿದ್ವತ್ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಶ್ರೀ ಪ್ರಜ್ವಲ್ ರೈ ಹಾಗೂ ಖಜಾಂಚಿ ಶ್ರೀ ಎಮ್. ಕೆ ಕಾಶೀನಾಥ್ ರವರು ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.