



ಕೋಲ್ಕತ್ತಾ: ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್ (ORS) (ಓರಲ್ ರೀಹೈಡ್ರೇಷನ್ ಸೊಲ್ಯೂಷನ್ ಚಿಕಿತ್ಸೆ ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ.ದಿಲೀಪ್ ಮಹಾಲ್ ನಬೀಸ್ ನಿಧನ ರಾಗಿದ್ದಾರೆ
ಓಆರ್‌ಎಸ್ ಸಂಶೋಧನೆ:
1971ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧ ಆರಂಭವಾದಾಗ ಲಕ್ಷಾಂತರ ನಿರಾಶ್ರಿತರು ಪಶ್ಚಿಮ ಬಂಗಾಳದ ಶಿಬಿರಗಳಲ್ಲಿ ಆಶ್ರಯ ಪಡೆದರು. ಈ ವೇಳೆ ಶುಚಿತ್ವದ ಹಾಗೂ ಶುದ್ಧ ಕುಡಿಯುವ ನೀರಿನ ತೊಂದರೆಯಿಂದಾಗಿ ಕಾಲರಾ, ಅತಿಸಾರದಿಂದ ತೀವ್ರವಾಗಿ ಹರಡಲು ಆರಂಭವಾಯಿತು. ಸೋಂಕಿಗೆ ಬಹಳಷ್ಟು ಮಕ್ಕಳು ಬಲಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಾ. ಮಹಲ್ ನಬೀಸ್ ಮೌಖಿಕ ಪುನರ್ಜಲೀಕರಣ ಬಚಿಕ(Oral Rehydration Therapy) (ಒಆರ್‌ಟಿ) (ORT) ಕಂಡುಹಿಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.