



ವಾಷಿಂಗ್ಟನ್: ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಪ್ರಶಸ್ತಿಯು 60 ವರ್ಷಗಳಲ್ಲೇ ಮೊದಲಬಾರಿಗೆ ಹೊಸ ಬದಲಾವಣೆಯೊಂದಕ್ಕೆ ತೆರೆದುಕೊಂಡಿದ್ದು,ಈ ಬಾರಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಬದಲಿಗೆ ಶಾಂಪೇನ್ ಕಾರ್ಪೆಟ್ ಕಂಗೊಳಿಸಲಿದೆ. 1961ರಲ್ಲಿ ಪ್ರಶಸ್ತಿ ಸಮಾರಂಭ ಶುರುವಾದಗಿನಿಂದ ಈ ವರೆಗೆ ಅನೇಕ ಬದಲಾವಣೆಗಳನ್ನು ಮಾಡಲಾಗಿದೆಯಾದರೂ, ರೆಡ್ ಕಾರ್ಪೆಟ್ ಮಾತ್ರ ಪ್ರತಿವರ್ಷವೂ ಮುಂದುವರಿದಿತ್ತು.ಆದರೆ, ಈ ವರ್ಷ ಖ್ಯಾತ ಸಲಹೆಗಾರರಾದ ಲೀಸಾ ಲವ್ ಹಾಗೂ ರೌಲ್ ಅವಿಲಾ ಅವರ ಸಲಹೆ ಮೇರೆಗೆ ಕಾರ್ಪೆಟ್ ಬಣ್ಣ ಬದಲಿಸಲು ನಿರ್ಧರಿಸಲಾಗಿದೆ. ಬ್ಲಾಕ್ ಟೈ ಡ್ರೆಸ್‌ಕೋಡ್‌ಗೆ ಈ ಬಾರಿ ಕಾರ್ಪೆಟ್ ಸೂಕ್ತವಾಗಿರಲಿದೆ. ಮುಂದಿನ ಬಾರಿ ಮತ್ತೂಂದು ಬದಲಾವಣೆ ಆಗಬಹುದು ಎಂದು ಲೀಸಾ ಲವ್ ಹೇಳಿದ್ದಾರೆ. ಈ ಬಾರಿಯ 95ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ ನಡೆಯಲಿದೆ. ಪ್ರಶಸ್ತಿ ಪ್ರದಾನ ಮಾಡುವವರ ಪೈಕಿ ಹಿಂದಿ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ಕೂಡ ಒಬ್ಬರಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.