logo
WhatsApp Image 2026-04-02 at 14.46.04.jpeg
hindalco everlast.jpeg

ನಮ್ಮ ನಾಡ ಒಕ್ಕೂಟ(ರಿ) ಕಾರ್ಕಳ ಘಟಕ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ಎನ್.ಎಸ್.ಪಿ. ವಿಧ್ಯಾರ್ಥಿ ವೇತನ ಶಿಬಿರ

ಟ್ರೆಂಡಿಂಗ್
share whatsappshare facebookshare telegram
14 Dec 2021
post image

ಕಾರ್ಕಳ : ನಮ್ಮ ನಾಡ ಒಕ್ಕೂಟ(ರಿ) ಕಾರ್ಕಳ ಘಟಕ ಇದರ ವತಿಯಿಂದ ನಮ್ಮ ನಾಡ ಒಕ್ಕೂಟ ಇದರ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಸೆಂಟ್ರಲ್ ಕಮಿಟಿಯ ಸಹಕಾರದೊಂದಿಗೆ ಆಯುಷ್ಮಾನ್ ಕಾರ್ಡ್ ಹಾಗೂ ಎನ್.ಎಸ್.ಪಿ. ವಿಧ್ಯಾರ್ಥಿ ವೇತನ ಶಿಬಿರವನ್ನು “ಜುಮ್ಮಾ ಮಸೀದಿ ಬೈಲೂರು ಆವರಣದಲ್ಲಿ ನಡೆಯಿತು ಕಾರ್ಯಕ್ರಮವು ಉಸ್ತಾದ್ ನಿಝಾಮುದ್ದೀನ್, ಖತೀಬರು ಶಾಫಿ ಜುಮಾ ಮಸೀದಿ, ಬೈಲೂರು ಇವರ ದುವಾಃದೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ, ಕಾರ್ಕಳ ತಾಲೂಕು, ಇದರ ಅಧ್ಯಕ್ಷರಾದ ಶಾಕಿರ್ ಹುಸೈನ್, ಬೈಲೂರು, ವಹಿಸಿದ್ದರು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿಯವರು ನಮ್ಮ ನಾಡ ಒಕ್ಕೂಟದ ಧ್ಯೇಯೋದ್ದೇಶಗಳಾದ ಶಿಕ್ಷಣ, ಸರಕಾರಿ ಉದ್ಯೋಗ ಹಾಗೂ ಮಕ್ಕಳ ನೈತಿಕ ಏಳಿಗೆಯ ಬಗ್ಗೆ ವಿವರಿಸಿದರು. ನಮ್ಮನಾಡ ಒಕ್ಕೂಟದ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಡಾ. ರಿಝ್ವಾನ್ ಅಹ್ಮದ್ ರವರು ಮುಖ್ಯ ವಿಷಯಗಳ ಬಗ್ಗೆ ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಖತೀಬರಾದ ನಿಝಾಮುದ್ದೀನ್ ಉಸ್ತಾದ್ ರವರು ಶಿಕ್ಷಣದ ಮಹತ್ವದ ಬಗ್ಗೆ ಅತ್ಯಂತ ಪ್ರಾಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ೯೨% ಅಂಕಗಳನ್ನು ಗಳಿಸಿದಂತಹ, ಜನಾಬ್ ಶಬ್ಬೀರ್, ಕಂಪನ್, ಬೈಲೂರು ಇವರ ಪುತ್ರಿಯಾದ ಫಾತಿಮಾ ಸುಫಯ್ಯಾ ರವರನ್ನು ವಿಶೇಷವಾಗಿ ಶಾಲನ್ನು ಹೊದಿಸಿ ಸಂಭಾವನೆಯನ್ನು ನೀಡುವ ಮೂಲಕ ಸನ್ಮಾನಿಸಲಾಯಿತು. ಕುಕ್ಕುಂದೂರು ಅಶ್ರಫ್ ಜುಮಾ ಮಸೀದಿಯಲ್ಲಿ ಹಮ್ಮಿಕೊಂಡAತಹ ಕಾರ್ಯಕ್ರಮದಲ್ಲಿ ತಯಾರಾದ ಆಯುಶ್ಮಾನ್ ಕಾರ್ಡ್ ಗಳನ್ನು ಮಸೀದಿಯ ಅಧ್ಯಕ್ಷರಾದ ಹನೀಫ್ ರವರಿಗೆ ಹಸ್ತಾಂತರಿಸಲಾಯಿತು. ನಮ್ಮನಾಡ ಒಕ್ಕೂಟದ ಅಧ್ಯಕ್ಷ ಶಾಕಿರ್ ಹುಸೈನ್ ರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು ವೇದಿಕೆಯಲ್ಲಿ ಜುಮಾ ಮಸೀದಿ ಬೈಲೂರು ಅಧ್ಯಕ್ಷರಾದ ಹಬೀಬ್ ಸಾಹೇಬ್ ಕಾರ್ಯದರ್ಶಿ ನಾಸಿರ್ ಶೇಖ್ ತ್ವಾಹಾ ಜುಮಾ ಮಸೀದಿ ಅಧ್ಯಕ್ಷ ಹೈದರ್ ಅಲಿ ,ನಮ್ಮ ನಾಡ ಒಕ್ಕೂಟದ ಉಪಾಧ್ಯಕ್ಷ , ಮನ್ಸೂರ್ ಅಹ್ಮದ್ ಜಿಲ್ಲಾ ಸದಸ್ಯ ಅಬ್ದುಲ್ ರಶೀದ್ ಬೈಲೂರು, ಹೆಬ್ರಿ ಘಟಕ ಸದಸ್ಯ ಮುನವ್ವರ್ , ಅಜೆಕಾರು ನೂರ್ ನವಾಝ್ ಬೈಲೂರು, ಉಪಸ್ಥಿತರಿದ್ದರು. ನಮ್ಮ ನಾಡ ಒಕ್ಕೂಟ, ಕಾರ್ಯದರ್ಶಿ ಶಬ್ಬೀರ್ ಅಹ್ಮದ್ ಮಿಯಾರು ಕಾರ್ಯಕ್ರಮನ್ನು ನಿರೂಪಿಸಿ ಧನ್ಯವಾದವಿತ್ತರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.