



ಕಾರ್ಕಳ : ಸಾಹಿತ್ಯ, ಸಂಗೀತ ಮುಂತಾದ ಸಾಹಿತ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಮನಕ್ಕೆ ಮತ್ತು ವ್ಯಕ್ತಿತ್ವಕ್ಕೆ ನೂತನ ರೂಪವನ್ನು ಕೊಡುತ್ತವೆ. ಚಿಂತನೆ ಮತ್ತು ಬರವಣಗೆಗಳಿಂದಾಗಿ ವ್ಯಕ್ತಿತ್ವ ಖಚಿತತೆಯನ್ನು ಪಡೆದುಕೊಂಡು ಸಮಾಜಕ್ಕೆ ಒಂದೊಳ್ಳೆಯ ಮಾದರಿ ವಿದ್ಯಾರ್ಥಿಗಳು ಸಿಗುತ್ತಾರೆ. ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಒತ್ತು ಕೊಟ್ಟರೆ ಸಾಲದು . ಪಠ್ಯೇತರ ಚಟುವಟಿಕೆಗಳಿಗೆ ಅವಕಾಶಗಳನ್ನು ಮೊಗೆದುಕೊಟ್ಟರೆ ಈ ಬಗೆಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಿAದ ಹೊರಬರುತ್ತಾರೆೆ ಎಂಬುದಾಗಿ ಖ್ಯಾತ ಸಾಹಿತಿ, ಚಿಂತಕ ಹಾಗೂ ಪ್ರಾಧ್ಯಾಪಕ ಅರವಿಂದ ಚೊಕ್ಕಾಡಿಯವರು ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿಂದ ‘ಸಾಹಿತಿಯ ಕಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮದಡಿಯಲ್ಲಿ ಮೂಡುಬಿದಿರೆಯ ತಮ್ಮ ನಿವಾಸಕ್ಕೆ ಬಂದ ಸಾಹಿತ್ಯ ಸಂಘದ ಸುಮಾರು ಅರುವತ್ತರಷ್ಟು ವಿದ್ಯಾರ್ಥಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಾಹಿತ್ಯ ಮನವನ್ನು ಅರಳಿಸುವುದಲ್ಲದೆ, ಸಮಾಜದ ಸಮಸ್ಯೆಯನ್ನು, ಆಗುಹೋಗುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಒಳಕಿಂಡಿಯಾಗಿ ಕೆಲಸಮಾಡುತ್ತದೆ ಎಂದು ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರೂ, ಸಾಹಿತ್ಯಸಂಘದ ಸಂಯೋಜಕರೂ ಆದ ಡಾ. ಅರುಣಕುಮಾರ ಎಸ್. ಆರ್ ಹಾಗೂ ಉಪನ್ಯಾಸಕಿ ಶ್ರೀಮತಿ ಸುಲೋಚನ ಪಚ್ಚಿನಡ್ಕ ಹಾಗೂ ಶ್ರೀಮತಿ ಪ್ರಮೀಳಾ ಚೊಕ್ಕಾಡಿ ಭಾಗವಹಿಸಿದ್ದರು. ಸಾಹಿತ್ಯ ಸಂಘದ ಸಹ ಕಾರ್ಯದರ್ಶಿ ಕು. ಶ್ವೇತಾ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ ವಂದಿಸಿದರು. ಇನ್ನೋರ್ವ ಕಾರ್ಯದರ್ಶಿ ಸೌರಭ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ್ ಎ.ಕೋಟ್ಯಾನ್ ಅವರ ನಿರ್ದೇಶನದಂತೆ ಸಂಘದ ಸದಸ್ಯರು ಕಾಂತಾವರ, ಬೆಳುವಾಯಿಯ ಚಿಟ್ಟೆ ಪಾರ್ಕ್ , ಕೊಡ್ಯಡ್ಕ, ಮೂಡಬಿದಿರೆಯ ಸಾವಿರ ಕಂಬದ ಬಸದಿ, ಕೊಡಂಜೆಕಲ್ಲು ಚಾರಣವನ್ನು ಮಾಡಿ ಸಾಹಿತ್ಯ ನಡಿಗೆ ಕಾರ್ಯಕ್ರಮವನ್ನು ಸ್ಮರಣಯವಾಗಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.