logo
WhatsApp Image 2026-04-02 at 14.46.04.jpeg
hindalco everlast.jpeg

ಅಂಡಾರು: ಮಾತಿನ ಚಕಮಕಿ ವೇಳೆ ಸರಾಯಿ ಬಾಟಲಿಯಿಂದ ಹಲ್ಲೆ

ಟ್ರೆಂಡಿಂಗ್
share whatsappshare facebookshare telegram
2 May 2022
post image

ಕಾರ್ಕಳ::ಇಬ್ಬರು ಸ್ನೇಹಿತರು ಸಾರಾಯಿ ಸೇವಿಸುತ್ತಿದ್ದ ಸಮಯ ಅಣ್ಣ ತಮ್ಮಂದಿರಲ್ಲಿ ಮಾತಿನ ಚಕಮಕಿ ನಡೆದು ಸರಾಯಿ ಬಾಟಲಿಯನ್ನು ಒಡೆದು ಚಿಕ್ಕಪ್ಪನ ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ಅಂಡಾರಿನಲ್ಲಿ ನಡೆದಿದೆ. ರತ್ನಾಕರ ರಾವ್ ಹಾಗೂ ತನ್ನ ಸ್ನೇಹಿತ ರಾಜೇಶನೊಂದಿಗೆ ತನ್ನ ಮನೆಯಲ್ಲಿ ಸಾರಾಯಿ ಸೇವಿಸುತ್ತಿದ್ದ ಸಮಯ ಆರೋಪಿತ ರತ್ನಾಕರ ಕೆಟ್ಟದಾಗಿ ಮಾತನಾಡಿದ್ದು, ಕರುಣಾಕರ ರಾವ್ ರತ್ನಾಕರ ನಲ್ಲಿ ನೀನ್ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ ಎಂದು ಕೇಳಿದಾಗ ರತ್ನಾಕರ ಒಮ್ಮೆಲೇ ಖಾಲಿ ಸಾರಾಯಿ ಬಾಟಲಿಯನ್ನು ಒಡೆದು ಕರುಣಾಕರ ರಾವ್ ಅವರನ್ನು ನೆಲಕ್ಕೆ ಬೀಳಿಸಿ ಬಾಟಲಿಯಿಂದ ಹಲ್ಲೆ ನಡೆಸಿ,ಕೊಂದು ಹಾಕುತ್ತೇನೆ ಎಂದು ಬಾಟಲಿ ಚೂರಿನಿಂದ ಕರುಣಾಕರ ರಾವ್ ಅವರ ಮೇಲೆ ಹಲ್ಲೆ ಮಾಡಲು ಬಂದಾಗ ನಯನ ಹಾಗೂ ರಾಜೇಶ್‌ರವರು ಸೇರಿ ಆರೋಪಿಯನ್ನು ತಡೆದು ಬೊಬ್ಬೆ ಹಾಕಿದಾಗ ಆರೋಪಿಯು ಬಾಟಲಿ ಚೂರನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.