logo
WhatsApp Image 2026-04-02 at 14.46.04.jpeg
hindalco everlast.jpeg

ಪಡುಬಿದ್ರೆ: ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು.

ಟ್ರೆಂಡಿಂಗ್
share whatsappshare facebookshare telegram
9 Mar 2024
post image

ಪಡುಬಿದ್ರೆ: ಕೆರೆಯ ನೀರಿನಲ್ಲಿ ಮುಳುಗಿ ಯುವಕನೋರ್ವ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಸಂಜೆ ಸಾಂತೂರು ಕೊಪ್ಲ ಪಡುಮನೆ ಎಂಬಲ್ಲಿ ನಡೆದಿದೆ.

ಮೃತರನ್ನು ಕಾರ್ಕಳ ಹಿರ್ಗಾನ ಗ್ರಾಮದ ಯೋಗೀಶ್ (29) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮನೆಯಿಂದ ಸಾಂತೂರು ಕೊಪ್ಲ ಪಡುಮನೆ ಎಂಬಲ್ಲಿ ಮರದ ಕೆಲಸಕ್ಕೆಂದು ಹೋಗಿದ್ದರು. ಸಂಜೆ ಅಲ್ಲಿಯ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.

ಆದರೆ ಯೋಗೀಶ್ ಒಳ್ಳೆಯ ಈಜುಗಾರನಾಗಿದ್ದು, ಅವರ ಕೆರೆಯ ನೀರಿನಲ್ಲಿ ಮುಳುಗಿ ಸತ್ತಿರುವ ಬಗ್ಗೆ ಸಂಶಯವಿರುವುದಾಗಿ ಮೃತರ ಸಹೋದರ ವಿಘ್ನೇಶ್ ನೀಡಿದ ದೂರಿನಂತೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.