logo
WhatsApp Image 2026-04-02 at 14.46.04.jpeg
hindalco everlast.jpeg

ಪಡುಬಿದ್ರಿ: ಪರವಾನಿಗೆ ಇಲ್ಲದೇ ಮರಳು ಸಾಗಾಟ : ಟಿಪ್ಪರ್ ಪೊಲೀಸರ ವಶ

ಟ್ರೆಂಡಿಂಗ್
share whatsappshare facebookshare telegram
21 Jan 2024
post image

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಪರವಾನಿಗೆ ಇಲ್ಲದೇ ಸಾಗಿಸಲಾಗುತ್ತಿದ್ದ ಸುಮಾರು 12 ಸಾ. ರೂ. ಮೌಲ್ಯದ 3 ಯುನಿಟ್‌ ಮರಳು ಸಹಿತ ಟಿಪ್ಪರನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಡುಬಿದ್ರಿ ಎಎಸ್‌ಐ ರಾಜೇಶ್‌ ಹಾಗೂ ಸಿಬಂದಿ ರಾತ್ರಿ ಪಾಳಿಯಲ್ಲಿದ್ದಾಗ ಮುಂಜಾನೆ 2-30ರ ವೇಳೆಗೆ ಅಡ್ವೆ ಜಂಕ್ಷನ್‌ನಲ್ಲಿ ಬಳ್ಕುಂಜೆ ಕಡೆಯಿಂದ ಬಂದಿದ್ದ ಟಿಪ್ಪರನ್ನು ಪರಿಶೀಲಿಸಿದಾಗ ಅದರಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿತ್ತು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.