logo
WhatsApp Image 2026-04-02 at 14.46.04.jpeg
hindalco everlast.jpeg

ಪಡುಕುಡೂರು : ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಅವರ ಪ್ರತಿಮೆ ಸ್ಥಾಪನೆ : ಸಮಾಲೋಚನಾ ಸಭೆ.

ಟ್ರೆಂಡಿಂಗ್
share whatsappshare facebookshare telegram
22 Apr 2022
post image

ಪಡುಕುಡೂರು : ಪಡುಕುಡೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೀರ್ತಿಶೇಷ ಎಂ.ಡಿ.ಅಧಿಕಾರಿ ಅವರ ಪ್ರತಿಮೆ ಸ್ಥಾಪನೆಯ ಬಗ್ಗೆ ಮಂಗಳವಾರ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದೇಶಿ ಉದ್ಯೋಗಿ ಪಡುಪರ್ಕಳ ಶಂಕರ ಶೆಟ್ಟಿ ಅವರ ನೇತ್ರತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು.

ಪಡುಪರ್ಕಳ ಶಂಕರ ಶೆಟ್ಟಿ ಅವರು ಮಾತನಾಡಿ ನಮ್ಮ ಪಡುಕುಡೂರಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟ ಎಂ.ಡಿ.ಅಧಿಕಾರಿ ಅವರು ಇತಿಹಾಸ ಸೇರಿದ್ದಾರೆ. ಅವರ ನೆನಪು ಶಾಶ್ವತ. ನಮ್ಮೂರಿನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿ ಮುಂದಿನ ಪಿಳೀಗೆಗೂ ಅವರನ್ನು ಪರಿಚಯಿಸಿ ನೆನಪಿಸುವ ಶಾಶ್ವತವಾದ ಕೆಲಸ ನಮ್ಮೆಲ್ಲರ ಮೂಲಕ ನಡೆಯಬೇಕಿದೆ. ಅತ್ಯಂತ ಯಶಸ್ವಿಯಾಗಿ ನಮ್ಮೆಲ್ಲ ಕಾರ್ಯಗಳು ನಡೆಯಲು ಎಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು.

ಎಲ್ಲರನ್ನು ಸೇರಿಸಿಕೊಂಡು ಪ್ರತಿಮೆ ಸ್ಥಾಪನೆಯ ಸಮಿತಿಯನ್ನು ರಚಿಸಿಕೊಂಡು ಕಾರ್ಯಪ್ರವೃತ್ತರಾಗಲು ನಿರ್ಣಯಿಸಲಾಯಿತು.

ಪಡುಕುಡೂರು ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಭಟ್‌, ಲಯನ್ಸ್‌ ಕ್ಲಬ್‌ ಪ್ರಾಂತೀಯ ಅಧ್ಯಕ್ಷ ಶಂಕರ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಪಡುಕುಡೂರು ಜನಾರ್ಧನ ಆಚಾರ್‌, ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ, ಮುದ್ರಾಡಿ ಸಂತೋಷ ಕುಮಾರ್‌ ಶೆಟ್ಟಿ, ಪರ್ಕಳ ಹರೀಶ ಶೆಟ್ಟಿ, ಪಡುಕುಡೂರು ಜಗದೀಶ ಹೆಗ್ಡೆ, ಹೃದಯ ಕುಮಾರ್‌ ಶೆಟ್ಟಿ, ಅಶೋಕ್‌ ಎಂ.ಶೆಟ್ಟಿ ಪಡುಕುಡೂರು ತಮ್ಮ ಅಭಿಪ್ರಾಯ ಮಂಡಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ, ವರಂಗ ಗ್ರಾಮ ಪಂಚಾಯಿತಿ ಸದಸ್ಯೆ ತಾರಾವತಿ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳು, ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಭಾಗವಹಿಸಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.