


ಚಂಡೀಗಢ: ಉಕ್ಕಿ ಹರಿಯುತ್ತಿರುವ ಸಟ್ಲೆಜ್ ನದಿ ನೀರಿನಲ್ಲಿ ಪಂಜಾಬ್‌ನ ಇಬ್ಬರು ಕೊಚ್ಚಿಕೊಂಡು ಹೋಗಿ ಪಾಕಿಸ್ತಾನಕ್ಕೆ ತಲುಪಿದ್ದು, ಅವರನ್ನು ಪಾಕಿಸ್ತಾನದ ಸೈನಿಕರು ಬಂಧಿಸಿದ್ದಾರೆ.
ಲೂಧಿಯಾನದ ಸಿಧ್ವಾನ್ ಬೆಟ್ ಗ್ರಾಮದ ರತನ್‌ಪಾಲ್ ಸಿಂಗ್ ಮತ್ತು ಹವೀಂದರ್ ಸಿಂಗ್ ಎಂಬುವವರೇ ಕೊಚ್ಚಿ ಹೋದವರು ಎಂದು ತಿಳಿದು ಬಂದಿದೆ.
ಈ ಕುರಿತು ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗೂ ಮಾಹಿತಿ ನೀಡಲಾಗಿದೆ. ಇಬ್ಬರನ್ನೂ ಬಿಎಸ್‌ಎಫ್‌ಗೆ ಪಾಕಿಸ್ತಾನ ಹಸ್ತಾಂತರಿಸುವುದನ್ನು ಕಾಯುತ್ತಿದ್ದೇವೆ. ಇಬ್ಬರು ತವರು ನೆಲಕ್ಕೆ ಮರಳಿದ ನಂತರವಷ್ಟೇ ಅವರು ಪಾಕಿಸ್ತಾನಕ್ಕೆ ದಾಟಲು ನಿಖರವಾದ ಕಾರಣವನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಕಿವಿ ಕೇಳಿಸದ ಭಾರತದ ವ್ಯಕ್ತಿಯೊಬ್ಬರು ಸಟ್ಲೆಜ್ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಪಾಕಿಸ್ತಾನಕ್ಕೆ ತಲುಪಿದ್ದು ವರದಿಯಾಗಿತ್ತು. ಈ ವ್ಯಕ್ತಿಯನ್ನು ಗುಪ್ತಚರ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದರು.
ಈ ವ್ಯಕ್ತಿಯನ್ನು 50 ವರ್ಷದ ಗಂಡಾ ಸಿಂಗ್ ವಾಲಾ ಎಂದು ಗುರುತಿಸಲಾಗಿತ್ತು. ಭಾರತೀಯ ಪ್ರಜೆಯಾದ ಈ ವ್ಯಕ್ತಿ ಕಿವುಡ ಮತ್ತು ಸನ್ನೆ ಭಾಷೆಯ ಮೂಲಕ ಸಂವಹನ ನಡೆಸುತ್ತಾನೆ. ಆತ ಹಿಂದೂ ಎಂದು ಹೇಳಿದ್ದು, ಸಟ್ಲೆಜ್ ನದಿಯ ಪ್ರವಾಹದ ನೀರಿನಲ್ಲಿ ಪಾಕಿಸ್ತಾನಕ್ಕೆ ನುಗ್ಗಿದ್ದಾನೆ. ವೈದ್ಯಕೀಯ ಪರೀಕ್ಷೆಯ ನಂತರ ಆ ವ್ಯಕ್ತಿಯನ್ನು ತನಿಖೆಗಾಗಿ ಗುಪ್ತಚರ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.