logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹಿಂದೂ ಧರ್ಮಕ್ಕೆ ಮತಾಂತರ ಆದ ಪಾಕಿಸ್ತಾನ್ ಸೋಷಿಯಲ್ ಮೀಡಿಯಾ ಸ್ಟಾರ್ ಶಯಾನ್ ಅಲಿ

ಟ್ರೆಂಡಿಂಗ್
share whatsappshare facebookshare telegram
16 Jun 2023
post image

ಪಾಕಿಸ್ತಾನದ ಪ್ರಖ್ಯಾತ ಸೋಶಿಯಲ್​ ಮೀಡಿಯಾ ಇನ್ಫ್ಲ್ಯುಯೆನ್ಸರ್​ ಇಸ್ಲಾಂ ಧರ್ಮಕ್ಕೆ ಗುಡ್​ ಬೈ ಹೇಳಿ, ಈಗ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ. ಅವರು ‘ ಎಲ್ಲದಕ್ಕೂ ಶ್ರೀಕೃಷ್ಣನೇ ಕಾರಣ ‘ ಎಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಇದೀಗ ಇಸ್ಲಾಂ ತೊರೆದು ಹಿಂದು ಧರ್ಮಕ್ಕೆ ಮತಾಂತರವಾದ ಪಾಕಿಸ್ತಾನಿಯನ್ನು ಶಯಾನ್ ಅಲಿ (Shayan Ali), ತಾವು ಮತಾಂತರ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೀವನದಲ್ಲಿ ತಾವು ಬಹು ಸಂಕಷ್ಟದಲ್ಲಿ ಇದ್ದಾಗ ತಮ್ಮಸಹಾಯಕ್ಕೆ ಬಂದವನೇ ಶ್ರಿ ಕೃಷ್ಣ. ತಾನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕಿರುಕುಳಕ್ಕೆ ನಲುಗಿ ಖಿನ್ನತೆಗೆ ಜಾರಿದ್ದ ಸಮಯದಲ್ಲಿ ತನ್ನ ಕೈ ಹಿಡಿದು ಮುನ್ನಡೆಸಿದ್ದು ಶ್ರೀಕೃಷ್ಣ ಎಂದು ಶಯಾನ್ ಆಲಿ ನೆನೆಪಿಸಿಕೊಂಡಿದ್ದಾರೆ. ತನ್ನನ್ನು ಎಂದಿಗೂ ಬಿಟ್ಟುಕೊಡದ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ ನೆಸ್ (ಇಸ್ಕಾನ್) ಗೂ ಈ ಸಂದರ್ಭದಲ್ಲಿ ಶಯಾನ್ ಧನ್ಯವಾದ ತಿಳಿಸಿದ್ದಾರೆ.

ಅಲ್ಲದೆ ಈ ತನ್ನ ಸ್ವ ಇಚ್ಚೆಯ ಮತಾಂತರವನ್ನು ಘರ್ ವಾಪ್ಸಿ ಎಂದು ಕರೆದಿರುವ ಶಯಾನ್ ಆಲಿ, ತಾವು ಎರಡು ವರ್ಷಗಳ ಕಾಲ ತಮ್ಮ ಪೂರ್ವಜರ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿದ ಬಳಿಕ ತಾವು ಮತಾಂತರ ಆಗಿದ್ದಾಗಿ ಅವರು ಹೇಳಿದ್ದಾರೆ.

ಭದ್ರತಾ ಪಡೆಗಳ ಕಿರುಕುಳದಿಂದಾಗಿ 2019 ರಲ್ಲೇ ತಾವು ಪಾಕಿಸ್ತಾನ ತೊರೆಯಬೇಕಿತ್ತು. ಆ ಸಮಯದಲ್ಲಿ ನಾನು ಖಿನ್ನತೆಗೆ ಜಾರಿದ್ದೆ ಮತ್ತು ಎಲ್ಲವನ್ನು ತ್ಯಜಿಸಲು ಮುಂದಾಗಿದ್ದೆ. ಇಂತಹ ಸಂಕಷ್ಟದ ಸಮಯದಲ್ಲಿ ನನ್ನ ಕೈಹಿಡಿದಿದ್ದು ಬೇರಾರೂ ಅಲ್ಲ, ಅದು ಶ್ರೀಕೃಷ್ಣ ಪರಮಾತ್ಮ. ಆತನಿಗೆ ಇದೀಗ ಕೃತಜ್ಞತೆ ಸಲ್ಲಿಸುವ ಸಮಯ ಬಂದಿದೆ. ಅಲ್ಲದೆ ನಾನು ನನ್ನ ಪೂರ್ವಿಕರನ್ನು ಹೆಮ್ಮೆಪಡುವಂತೆ ಮಾಡಬೇಕಿದೆ ಎಂಬುದಾಗಿ ಶಯಾನ್ ಆಲಿ ಹೇಳಿದ್ದಾರೆ.

“ನಾನು ಇತರೆ ಧರ್ಮದವರನ್ನು ದ್ವೇಷಿಸುವ ಯಾವುದೇ ದ್ವೇಷದ ಭಾಗವಾಗಿರಲು ನಾನು ಬಯಸೋದಿಲ್ಲ. ನಾನು ಇತರರ ನಂಬಿಕೆಗಳನ್ನು ಗೌರವಿಸುತ್ತೇನೆ. ಅವನು ಅಥವಾ ಅವಳು ಯಾವ ಧರ್ಮಕ್ಕೆ ಸೇರಿದ್ದಾಳೆ ಎಂಬುದು ಇಲ್ಲಿ ವಿಷಯವೇ ಅಲ್ಲ, ಎಲ್ಲರನ್ನು ಗೌರವಿಸುವ ಎಂದು ಭಗವದ್ಗೀತೆ ಕಲಿಸಿದೆ. ನಾನೀಗ ತನ್ನ ಮೂಲ ಬೇರಿನೆಡೆ ವಾಪಸ್ ಮರಳುತ್ತಿರುವುದಕ್ಕೆ ನನಗೆ ಹೆಮ್ಮೆ ಅನ್ನಿಸುತ್ತಿದೆ. ನನ್ನ ಪೂರ್ವಿಕರು ಕೂಡ ಇದೇ ಭಾವನೆಯನ್ನು ಹೊಂದಿರುತ್ತಾರೆ ಎಂಬ ಭಾವನೆ. ನನಗಿದೆ.” ಎಂದು ಶಯಾನ್ ಆಲಿ ತಿಳಿಸಿದ್ದಾರೆ.

‘ ಕಾಶ್ಮೀರ್ ಹಾನ್ ಮೇನ್ ‘ ಎಂಬ ಹೆಸರಿನ ಐಎಸ್ಐನ ಮ್ಯೂಸಿಕ್ ವಿಡಿಯೋದಲ್ಲಿ ಕೆಲಸ ಮಾಡಲು ಶಯಾನ್ ಆಲಿಯನ್ನು ಕೇಳಿಕೊಳ್ಳಲಾಗಿತ್ತು. ಆತ ಅದನ್ನು ನಿರಾಕರಿಸಿದ್ದಕ್ಕೆ ಶಯಾನ್ ಅಲಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಈಗ ಹುಡುಕಾಡುತ್ತಿದೆ. ಆತನನ್ನು ಜ್ಯೂವಿಶ್ ಏಜೆಂಟ್ ಮತ್ತು ಭಾರತೀಯ ಗುಪ್ತಚರ ಸಂಸ್ಥೆ ರಾ (RAW) ಸದಸ್ಯ ಎಂದು ಪಾಕಿಸ್ತಾನಿ ಗೂಢಚಾರ ಸಂಸ್ಥೆ ಐಎಸ್ಐ ಆರೋಪಿಸಿದೆ. ಹೀಗಾಗಿ ಶಯಾನ್ ಅಲಿ ಸದ್ಯ ಪಾಕಿಸ್ತಾನವನ್ನು ಬಿಟ್ಟು ಹೊರಡಬೇಕಿದೆ ಎಂಬ ಮಾಹಿತಿ ಇದೆ. ಈಗ ಶಯಾನ್ ಆಲಿ, ತಾನು ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಬರೋದಾಗಿ ಘೋಷಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.