



ಕಾರ್ಕಳ : ರಸ್ತೆ ಬದಿ ಕಸ ಎಸೆದಾತನಿಗೆ ನೀರೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಂಡ ಹಾಕಿ ಅವರಿಂದಲೇ ಆ ಕಸವನ್ನು ತೆಗೆಸಿ ತೆಗೆಸಿರುವ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾ.ಪಂ ಜಡ್ಡಿನಂಗಡಿ ಅರಣ್ಯ ವ್ಯಾಪ್ತಿಯ ಉಡುಪಿ -ಕಾರ್ಕಳ ಹೈವೆ ಯಲ್ಲಿ ನಡೆದಿದೆ. .
ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ಸುರಕ್ಷಿತ ಅರಣ್ಯ ಬಳಿಯ ಉಡುಪಿ -ಕಾರ್ಕಳ ಹೈವೆ ಯಲ್ಲಿ ಜಾರ್ಕಳ ಮೂಲದ ವ್ಯಕ್ತಿಯೋರ್ವರು ಬೈಕಿನಲ್ಲಿ ಬಂದು ರಟ್ಟು ಪ್ಲಾಸ್ಟಿಕ್ ಇತರೆ ತ್ಯಾಜ್ಯ ವನ್ನು ರಸ್ತೆ ಬದಿ ಎಸೆದಿರವುದನ್ನು ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ .ಅಂಕಿತಾ ನಾಯಕ್ ಬೆಳಿಗ್ಗೆ ಕರ್ತವ್ಯಕ್ಕೆ ಬರುತ್ತಿದ್ದಾಗ ಗಮನಿಸಿ ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿ ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗಣೇಶ್ ರವರನ್ನು ಬರುವಂತೆ ತಿಳಿಸಿ ಸ್ಥಳದಲ್ಲೇ ಕಸ ಎಸೆದಾತನಿಗೆ ರೂ .500 ದಂಡ ವಿಧಿಸಿ .ಅದೇ ವ್ಯಕ್ತಿಯಿಂದ ಕಸವನ್ನು ತೆಗೆಸಿ ಎಸ್ .ಎಲ್ .ಆರ್ .ಎಂ .ವಾಹನಕ್ಕೆ ಹಾಕಲು ಸೂಚಿಸಿರುತ್ತಾರೆ .ನೀರೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾರೂ ಎಲ್ಲೆಂದರಲ್ಲಿ ಕಸವನ್ನು ಹಾಕುವಂತಿಲ್ಲ ಹಾಕಿದಲ್ಲಿ ದಂಡ ವಿಧಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.