



ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವ ಧ್ಯಾನ ಮಂದಿರದ ರಾಜಯೋಗ ಸಭಾಭವನದಲ್ಲಿ ಸೆ.16ರಂದು ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಕಾರ್ಕಳ ಶ್ರೀಮದ್ ಭುವನೇಂದ್ರ ವಿದ್ಯಾಶಾಲಾ ಸಂಚಾಲಕರು, ಉದ್ಯಮಿಗಳಾದ ಎಸ್. ನಿತ್ಯಾನಂದ ಪೈ ಮಾತನಾಡುತ್ತಾ ಗೀತೆಯ ಸಾರವನ್ನು ಅಳವಡಿಸಿದಾಗ ಮನಶಾಂತಿ ಸಿಗುತ್ತದೆ. ಸನಾತನ ಧರ್ಮದ ಉಳಿವಿನ ಬಗ್ಗೆ ಈ ರೀತಿಯ ಕಾರ್ಯಕ್ರಮಗಳಿಂದ ಜನರಲ್ಲಿ ಅರಿವು ಮೂಡಿಸಲು ಸಾದ್ಯ ಎಂದರು. ತೀರ್ಪುಗಾರರಾಗಿ ಪುಲ್ಕೇರಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸಾಕಮ್ಮರವರು ಮಕ್ಕಳು ಶ್ರೀಕೃಷ್ಣನ ಅವತಾರಗಳ ಭಾಲಪ್ರತಿಭೆೆಯನ್ನು ವಿವಿಧ ರೀತಿಯಿಂದ ಪ್ರದರ್ಶಿಸುವುದರಿಂದ ಮಕ್ಕಳ ಪೋಷಕರಿಗೆ, ಆಗಮಿಸಿದವರಿಗೆ ಸಂತೋಷವಾಗುವುದರ ಜೊತೆಗೆ ಪ್ರತಿಭಾ ಪುರಸ್ಕಾರವಾಗುತ್ತದೆ ಎಂದರು.
ದುರ್ಗಾ ಕಾಡಂಬಳ ಅಂಗನವಾಡಿ ಶಿಕ್ಷಕಿ ಶ್ರೀಮತಿ ವಸಂತಿ ಕಡಂಬಳ, ಮುಖ್ಯ ಅತಿಥಿಗಳಾಗಿ ಕಾರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಸಚ್ಚಿನ್ ಶೆಟ್ಟಿ, ಯುರೋಕಿಡ್ಸ್ ಕಾರ್ಕಳ ಇದರ ಸೆಂಟರ್ ಹೆಡ್ ಶ್ರೀಮತಿ ಕುಮುದಾ ರಾವ್ ಶುಭ ಹಾರೈಸಿದರು. ರಾಜಯೋಗಿನಿ ಬ್ರಹ್ಮಾ ಕುಮಾರಿ ಮಂಜುಳ ಬ್ರಹ್ಮಾವರ ಇವರು ಸತ್ಯಯುಗದ ದೈವಿ ರಾಜಕುಮಾರ ಶ್ರೀ ಕೃಷ್ಣನಿಗೆ ಹಲವಾರು ಕಳಂಕಗಳನ್ನು ಹಾಕ್ಕಿದ್ದು, ವಾಸ್ತವವಾಗಿ ಈಶ್ಚರೀಯ ವಿಶ್ವ ವಿದ್ಯಾಲಯದಲ್ಲಿ ಪಡೆದುಕೊಳ್ಳುವ ರಾಜಯೋಗದಿಂದ ದೈವಿಗುಣಗಳನ್ನು ಪಡೆದುಕೊಂಡು ಮಾನಸಿಕ ನೆಮ್ಮದಿಯನ್ನು ಪಡೆಯಬಹುದು ಎಂದರು.
ಬಿ. ಕೆ. ವರದರಾಯ ಪ್ರಭು ಸ್ವಾಗತಿಸಿದರು, ಬಿ.ಕೆ. ಅನ್ನಪೂರ್ಣ ಸಂಸ್ಥೆಯ ಪರಿಚಯ ತಿಳಿಸಿದರು.
ರಾಜಯೋಗಿನಿ ಬ್ರಹ್ಮಾ ಕುಮಾರಿ ವಸಂತಿ ದನ್ಯವಾದ ಅರ್ಪಿಸಿದರು. ಬಿ. ಕೆ. ಸಂದೇಶ್ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ಎಲ್ಲಾ ಸ್ಪರ್ದಾಳುಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.