



ಬೆಂಗಳೂರು: ರಾಜ್ಯದಲ್ಲಿ ಇನ್ ಸ್ಟಾಲೇಶನ್ ಚಾರ್ಜಸ್ ಪಾವತಿಸದೆ ಇರುವ ಟವರ್ ಗಳಿಂದ ನಷ್ಟ ಉಂಟಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಅಕ್ರಮವಾಗಿ ಮೊಬೈಲ್ ಟವರ್ ಗಳನ್ನು ಸ್ಥಾಪಿಸಿರುವ ಸಂಸ್ಥೆಗಳಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಸಿಎಂ, ಈ ಮೂಲಕ ರಾಜ್ಯವು 7,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬಹುದು ಎಂದು ತಿಳಿಸಿದ್ದಾರೆ. ಕರ್ನಾಟಕ ಇನ್ ಸ್ಟಾಲೇಶನ್ ಆಫ್ ನ್ಯೂ ಟೆಲಿ ಕಮ್ಯುನಿಕೇಶನ್ ಇನ್ಫ್ಯಾಸ್ಟ್ರಕ್ಚರ್ ಟವರ್ಸ್ ನಿಯಮಾವಳಿ 2019 ರ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷ ರೂ ವರೆಗೆ ಇತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50,000 ರೂ. ನಗರ ಪುರಸಭಾ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಿತಿಗಳಲ್ಲಿ 35,000 ರೂ. ಇನ್ಸ್ಟಾಲೇಶನ್ ಚಾರ್ಜಸ್ ವಿಧಿಸಬಹುದಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 8000 ಟವರ್ ಗಳು ಇದ್ದು ರಾಜ್ಯದಾದ್ಯಂತ 48000 ಟವರ್ ಗಳಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.