



ನವದೆಹಲಿ: ಮುಂಬೈನಲ್ಲಿ ಪೆಟ್ರೋಲ್ ₹112.11 ಬೆಂಗಳೂರು: ದೇಶದಲ್ಲಿ ಬುಧವಾರ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 35 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ₹ 106.19 ಮತ್ತು ಡೀಸೆಲ್ ₹ 94.92ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹109.89 ಮುಟ್ಟಿದ್ದು, ಡೀಸೆಲ್ ₹100.75 ಆಗಿದೆ. ವ್ಯಾಟ್‌ನ ಕಾರಣದಿಂದ ಮುಂಬೈನಲ್ಲಿ ಪೆಟ್ರೋಲ್ ₹112.11 ತಲುಪಿದರೆ, ಡೀಸೆಲ್ ₹102.89 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹103.31, ಡೀಸೆಲ್ ₹99.26; ಕೋಲ್ಕತ್ತದಲ್ಲಿ ಪೆಟ್ರೋಲ್ ₹106.78, ಡೀಸೆಲ್ ₹98.03ಕ್ಕೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 85.08 ಡಾಲರ್ ತಲುಪಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.