logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಭೌತಿಕ ವಸ್ತುಗಳು ಕೂಡಾ ಚರಿತ್ರೆಯ ಭಾಗಗಳಾಗಿವೆ - ಇತಿಹಾಸ ತಜ್ಞ ಪ್ರೋ . ತುಕರಾಂ ಪೂಜಾರಿ

ಟ್ರೆಂಡಿಂಗ್
share whatsappshare facebookshare telegram
24 Oct 2023
post image

ಕಾರ್ಕಳ : ಚರಿತ್ರೆ ಎನ್ನುವುದು ಕೇವಲ ಕಾಲ ಮತ್ತು ಘಟನೆಗಳ ಮೊತ್ತವಷ್ಟೇ ಆಗಿರದೆ ಮೌಖಿಕ ಸಾಹಿತ್ಯ ಮತ್ತು ಭೌತಿಕ ಸಾಮಾಗ್ರಿಗಳು ಕೂಡಾ ಚರಿತ್ರೆಯ ಭಾಗಗಳೇ ಆಗಿವೆ. ಮನುಷ್ಯ ನಿರ್ಮಿತ ಈ ಭೌತಿಕ ವಸ್ತುಗಳೆಲ್ಲವೂ ಗತಕಾಲದ ಜೀವನಕ್ರಮ ಮತ್ತು ಸಂಸ್ಕೃತಿಯನ್ನು ನಮಗೆ ಪರಿಚಯಿಸಿದರೆ, ಬದಲಾದ ಇಂದಿನ ಜೀವನಶೈಲಿ ಹಾಗೂ ಮುಂದೆ ಎದುರಾಗಲಿರುವ ಆಪತ್ತಿನ ಬಗ್ಗೆಯೂ ಸೂಚ್ಯವಾಗಿ ಅವು ನಮಗೆ ತಿಳಿಸಿಕೊಡುತ್ತವೆ ಎಂಬುದಾಗಿ ಖ್ಯಾತ ಇತಿಹಾಸ ತಜ್ಞ ಹಾಗೂ ಬಂಟ್ವಾಳದ ತುಳು ಬದುಕು ವಸ್ತುಸಂಗ್ರಹಾಲಯ ಮತ್ತು ರಾಣ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿರುವ ಪ್ರೊ. ತುಕಾರಾಂ ಪೂಜಾರಿಯವರು ಇಲ್ಲಿ ಮಾತನಾಡುತ್ತ ತಿಳಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಮತ್ತು ಕನ್ನಡ ಸಂಘ ಕಾಂತಾವರ ಇವರ ಜಂಟಿ ಸಹಯೋಗದೊಂದಿಗೆ ಕಾರ್ಕಳದ ಸರಕಾರಿ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆದ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ಭೌತಿಕ ಶೋಧ (ವಸ್ತುವಿನ ಮುಖಾಂತರ ಚರಿತ್ರೆ)” ಎಂಬ ವಿಷಯದ ಕುರಿತು ಮಾತನಾಡಿದರು. ಚರಿತ್ರೆ ಎನ್ನು ವುದು ಕೇವಲ ಕಾಲ ಮತ್ತು ಘಟನೆಗಳ ಮೊತ್ತವಷ್ಟೇ ಆಗಿರದೆ ಮೌಖಿಕ ಸಾಹಿತ್ಯ ಮತ್ತು ಭೌತಿಕ ಸಾಮಾಗ್ರಿಗಳು ಕೂಡಾ ಚರಿತ್ರೆಯ ಭಾಗಗಳೇ ಆಗಿವೆ. ಮನುಷ್ಯ ನಿರ್ಮಿತ ಈ ಭೌತಿಕ ವಸ್ತುಗಳೆಲ್ಲವೂ ಗತಕಾಲದ ಜೀವನಕ್ರಮ ಮತ್ತು ಸಂಸ್ಕೃತಿಯನ್ನು ನಮಗೆ ಪರಿಚಯಿಸಿದರೆ, ಬದಲಾದ ಇಂದಿನ ಜೀವನಶೈಲಿ ಹಾಗೂ ಮುಂದೆ ಎದುರಾಗಲಿರುವ ಆಪತ್ತಿನ ಬಗ್ಗೆಯೂ ಸೂಚ್ಯವಾಗಿ ಅವು ನಮಗೆ ತಿಳಿಸಿಕೊಡುತ್ತವೆ ಎಂಬುದಾಗಿ ಖ್ಯಾತ ಇತಿಹಾಸ ತಜ್ಞ ಹಾಗೂ ಬಂಟ್ವಾಳದ ತುಳು ಬದುಕು ವಸ್ತುಸಂಗ್ರಹಾಲಯ ಮತ್ತು ರಾಣ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿರುವ ಪ್ರೊ. ತುಕಾರಾಂ ಪೂಜಾರಿಯವರು ಇಲ್ಲಿ ಮಾತನಾಡುತ್ತ ತಿಳಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಮತ್ತು ಕನ್ನಡ ಸಂಘ ಕಾಂತಾವರ ಇವರ ಜಂಟಿ ಸಹಯೋಗದೊಂದಿಗೆ ಕಾರ್ಕಳದ ಸರಕಾರಿ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆದ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ಭೌತಿಕ ಶೋಧ (ವಸ್ತುವಿನ ಮುಖಾಂತರ ಚರಿತ್ರೆ)” ಎಂಬ ವಿಷಯದ ಕುರಿತು ಮಾತನಾಡಿದರು. ಪ್ರತಿಯೊಂದು ಭೌತಿಕ ವಸ್ತುವಿನ ಹಿಂದೆಯೂ ಒಂದಾನೊಂದು ಚರಿತ್ರೆಯಿದ್ದು ಇವೆಲ್ಲವೂ ಒಂದು ಕಾಲದ ತುಳುನಾಡಿನ ಸಾಮಾಜಿಕ ವ್ಯವಸ್ಥೆಯ ಪರಿಚಯವನ್ನು ಮಾಡಿಕೊಡುತ್ತವೆ. ನಮ್ಮ ಹಿರಿಯರು ಬೆಳೆದು ಬಂದ ಬದುಕಿನ ಕ್ರಮವನ್ನು ಇಂದು ಅನೇಕ ಕಾರಣಗಳಿಂದಾಗಿ ಉಳಿಸಿಕೊಳ್ಳಲಾಗದಿದ್ದರೂ ಆ ಭೌತಿಕ ವಸ್ತುಗಳನ್ನು ಮುಂದಿನ ಪೀಳಿಗೆಯ ನೆನಪಿಗಾಗಿಯೂ ಕಾಪಿಡಬೇಕಾಗಿದೆ. ಇತಿಹಾಸ ಪ್ರಜ್ಞೆಯನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ಅವುಗಳಿಂದ ನಾವು ಅನೇಕ ಪಾಠಗಳನ್ನೂ ಕಲಿಯಬೇಕಾಗಿರುವುದರಿಂದ ಅವುಗಳ ರಕ್ಷಣೆಯೂ ಮಹತ್ವದ ಸಂಗತಿಯಾಗಿದೆ ಅಂದರು. ಅತಿಥಿಗಳನ್ನು ಸ್ಮರಣ ಕೆ ನೀಡಿ ಗೌರವಿಸಲಾಯಿತು. ಅ.ಭಾ.ಸಾ.ಪ. ತಾಲೂಕು ಘಟಕದ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ, ಉಪಾಧ್ಯಕ್ಷರಾದ ಏರ್‌ವೈಸ್ ಮಾರ್ಷಲ್ ರಮೇಶ್ ಕಾಣಕ್, ಡಾ.ನಾ.ಮೊಗಸಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿದರು. ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿಅ.ಭಾ.ಸಾ.ಪ ತಾಲೂಕು ಅಧ್ಯಕ್ಷರಾದ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.