



ಹೊಸದಿಲ್ಲಿ: ಸ್ಪೈಸ್ ಜೆಟ್ ತನ್ನ ಇಬ್ಬರು ಪೈಲಟ್ ಗಳನ್ನು ಕರ್ಜಿಕಾಯಿ ಮತ್ತು ಪಾನೀಯಗಳನ್ನು ಸೇವಿಸಿದ್ದಕ್ಕಾಗಿ ತೆಗೆದು ಹಾಕಿದೆ. ಹೋಳಿ ಹಬ್ಬದ ದಿನದಂದು ವಿಮಾನದ ಕಾಕ್ ಪಿಟ್ ನಲ್ಲಿ ಇಬ್ಬರು ಕರ್ಜಿಕಾಯಿ ಜೊತೆ ತಂಪು ಪಾನೀಯ ಸೇವಿಸಿದ್ದರು. ಇದರ ಫೋಟೋ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಸ್ಪೈಸ್ ಜೆಟ್ ಅಧಿಕಾರಿಗಳ ಪ್ರಕಾರ, ಪೈಲಟ್ ಗಳು ಈ ರೀತಿ ಮಾಡುವ ಮೂಲಕ ವಿಮಾನ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಪೈಸ್ ಜೆಟ್ ಏರ್ ಲೈನ್ ನ ವಕ್ತಾರರು, ಕಂಪನಿಯು ಕಾಕ್ ಪಿಟ್ ನಲ್ಲಿ ಆಹಾರ ಸೇವನೆಗೆ ಕಟ್ಟುನಿಟ್ಟಾದ ನೀತಿಯನ್ನು ಹೊಂದಿದೆ. ಇದನ್ನು ಎಲ್ಲಾ ವಿಮಾನ ಸಿಬ್ಬಂದಿಗಳು ಅನುಸರಿಸಬೇಕು ಎಂದು ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಇಬ್ಬರನ್ನೂ ತೆಗೆದು ಹಾಕಲಾಗಿದೆ ಮತ್ತು ಅವರ ವಿರುದ್ಧದ ವಿಚಾರಣೆ ಬಾಕಿಯಿದೆ. ತನಿಖೆ ಪೂರ್ಣಗೊಂಡ ನಂತರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.