



ಕಾರ್ಕಳ ಆ.6; ಕಾರ್ಕಳ ಪುರಸಭೆ ವ್ಯಾಪ್ತಿಯ ನಗರ ಮೂರು ಮಾರ್ಗ ಬಳಿ ಮಂಗಳೂರಿಗೆ ತೆರಳುವ ರಸ್ತೆ ಕಳೆದ ರಾತ್ರಿಯಿಂದ ಸುರಿದ ಮಳೆಗೆ ಸಂಪೂರ್ಣ ಕೆಟ್ಟು ಹೋಗಿದೆ.ಮೊದಲೆ ಈ ರಸ್ತೆಯಲ್ಲಿ ಓಡಾಡುವುದಕ್ಕೆ ಆಗುತ್ತಿರಲಿಲ್ಲ. ಅಷ್ಟು ಗುಂಡಿಗಳು ಅಷ್ಟೂ ದೂರದಲ್ಲಿದೆ. ಅದರೆಡೆಗೆ ಮಳೆಯೂ ಸಿಕ್ಕಾ ಬಟ್ಟೆ ಸುರಿದಿದ್ದು ರಸ್ತೆ ನೋಡಲಾಗದ ಸ್ಥಿತಿಗೆ ತಲುಪಿತ್ತು.ಇದರಿಂದ ಮನನೊಂದ ನಗರದ ರಿಕ್ಷಾ ಚಾಲಕರೋರ್ವರು ಬುಧವಾರ ರಸ್ತೆಹೊಂಡದಲ್ಲಿ ಬಾಳೆ ಗಿಡನೆಟ್ಟು ಪ್ರತಿಭಟಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ರಸ್ತೆ ಮಂಗಳೂರು ಕಡೆಗೆ ಸಂಪರ್ಕ ಬೆಸೆಯುವ ರಸ್ತೆಯಾಗಿದೆ..ಒಳಚರಂಡಿ ಕಾಮಗಾರಿಯ ಸಂದರ್ಭ ಡಾಮಾರು ರಸ್ತೆ ಹಾನಿಯಾಗಿತ್ತು.ಅನಂತರ ದುರಸ್ತಿ ಆಗಾಗ ಪಡಿಸಲಾಗುತಿತ್ತು.ಅದೆಲ್ಲ ತಾತ್ಕಾಲಿಕವಾಗಿಯೆ ನಡೆಯುಯಿತ್ತು. ದಿನ ಕಳೆಯುತ್ತ ಬಂದಂತೆ .ರಸ್ತೆ ಪೂರ್ತಿ ಹೊಂಡಗಳೆ ತುಂಬಿ ವಾಹನ ಸಂಚಾರ, ಕಾಲ್ನಡಿಗೆ ಯಾವುದ್ರಲ್ಲೂ ತೆರಳಲು ಸಾದ್ಯವಾಗುತಿಲ್ಲ. .ರಸ್ತೆ ಬದಿ ಅಂಗಡಿಯವರು, ಮನೆಯವರು ಸಮಸ್ಯೆ ಅನುಭವಿಸುತಿದ್ದರು..ಇಷ್ಟೆಲ್ಲ ಆಗುತಿದ್ದರೂ ಪುರಸಭೆ ಅಧಿಕಾರಿಗಳು ಹೊಂಡ ಸಮಸ್ಯೆ ಶಾಸ್ವತ ಪರಿಹಾರಕ್ಕೆ ಪ್ರಯತ್ನಿಸದೆ ಇದ್ದರು.ಕ್ಷೇತ್ರದ ಶಾಸಕರು ರಾಜ್ಯದ ಮಂತ್ರಿಯಾದ ಮೇಲಾದರು ಗುಂಡಿ ಸರಿ ಪಡಿಸಬಹುದು ಎಂದು ಜನ ನಂಬಿದ್ದರು. ರಸ್ತೆಯ ಹೊಂಡಕ್ಕೆ ಮುಕ್ತಿ ನೀಡುವ ಬಗ್ಗೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಗಮನಕೊಡುತಿಲ್ಲ ಅಂತ ಸಾರ್ವಜನಿಕರು ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.