



ಬೆಂಗಳೂರು: ಚಂದ್ರಯಾನ 3 ಯಶಸ್ವಿಯಾದ ದಿನ ಅಂದರೆ ಆಗಸ್ಟ್ 23ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಮೋದಿ ಘೋಷಣೆ ಮಾಡಿದರು ಬೆಂಗಳೂರಿನ ಇಸ್ರೋ ಕಮಾಂಡ್ ಕೇಂದ್ರದಲ್ಲಿ ಶನಿವಾರ ಬೆಳಗ್ಗೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಮೋದಿ ಈ ಘೋಷಣೆ ಮಾಡಿದರು. ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ಪ್ರಧಾನಿ ಮೋದಿ ನಾಮಕರಣ ಮಾಡಿದರು. ಚಂದ್ರಯಾನ-3 ಯಶಸ್ಸಿಗೆ ಮಹಿಳಾ ವಿಜ್ಞಾನಿಗಳ ಕೊಡುಗೆಯೂ ಇದೆ ಎಂದು ಮಹಿಳಾ ವಿಜ್ಞಾನಿಗಳನ್ನು ಕೊಂಡಾಡಿದರು ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯೋಣ. ಶಿವನಲ್ಲಿ ಮಾನವ ಶಕ್ತಿಯನ್ನು ರೂಪಿಸುವ ಶಕ್ತಿ ಇದೆ. ಚಂದ್ರನ ಮೇಲೂ ತಿರಂಗ ರಾರಾಜಿಸುತ್ತಿದೆ ಎಂದರು.
ಚಂದ್ರಯಾನ-2 ಪತನ ಸ್ಥಳಕ್ಕೆ ‘ತಿರಂಗ ಪಾಯಿಂಟ್’ ಎಂದು ಹೆಸರಿಟ್ಟರು. ಈ ತಿರಂಗ ಪಾಯಿಂಟ್ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಚಂದ್ರಯಾನ 3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದಿದೆ. ಮೇಕ್ ಇನ್ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ ಎಂದು ಮೋದಿ ಹೇಳಿದರು. ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ. ಚಂದ್ರನ ಮೇಲೆ ಪ್ರಜ್ಞಾನ್ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ ಎಂದು ಮೋದಿ ಹೇಳಿದರು. ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ. ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು ಎಂದು ವಿಜ್ಞಾನಿಗಳನ್ನು ಉದ್ದೇಶಿಸಿ ಮೋದಿ ಹೇಳಿದರು. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ಹೇಳುವ ವೇಳೆ ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಮಂತ್ರಿ ಮೋದಿ ಭಾವುಕರಾದರು. ಪ್ರತಿಯೊಬ್ಬ ವಿಜ್ಞಾನಿಗೂ ನನ್ನಿಂದ ಸಲ್ಯೂಟ್. ನಿಮ್ಮ ಧೈರ್ಯ, ಶಕ್ತಿ, ಶ್ರಮ, ಸಾಮರ್ಥ್ಯಕ್ಕೆ ನನ್ನ ನಮನ ಎಂದು ಮೋದಿ ಹೇಳಿದರು. ಸದ್ಯ ಭಾರತ ಚಂದ್ರನ ಮೇಲಿದೆ. ದೇಶದ ಘನತೆಯನ್ನು ಉತ್ತುಂಗಕ್ಕೇರಿಸಿದ್ದಕ್ಕೆ ಧನ್ಯವಾದಗಳು ಎಂದು ಮೋದಿ ಹೇಳಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.