logo
WhatsApp Image 2026-04-02 at 14.46.04.jpeg
hindalco everlast.jpeg

ಅಂದರ್ ಬಾಹರ್ ಅಡ್ಡೆಗೆ ಪೊಲೀಸರ ದಾಳಿ: ನಾಲ್ವರು ಪೊಲೀಸ್ ವಶಕ್ಕೆ, ಓರ್ವ ಪರಾರಿ

ಟ್ರೆಂಡಿಂಗ್
share whatsappshare facebookshare telegram
22 Jul 2022
post image

ಕುಂದಾಪುರ: ಇಸ್ಪೀಟು ಅಂದರ್ ಬಾಹರ್ ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು 2100 ರೂ.‌ ಹಣ ಸ್ವಾಧೀನಪಡಿಸಿಕೊಂಡ ಘಟನೆ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಜಾಡ್‌ಕಟ್ಟು ಎಂಬಲ್ಲಿ ಜುಲೈ 21ರಂದು ನಡೆದಿದೆ. ಆರೋಪಿಗಳನ್ನು‌ ಸ್ಥಳೀಯ ನಿವಾಸಿಗಳಾದ ರಾಮ, ಶಂಕರ ಮೊಗವೀರ, ಭಾಸ್ಕರ ಪೂಜಾರಿ ಹಾಗೂ ಶಿವರಾಮ ಎಂದು ಗುರುತಿಸಲಾಗಿದೆ. ಇವರು ಜಾಡ್‌ಕಟ್ಟು ಎಂಬಲ್ಲಿ ಅಂದರ್ ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದರು‌. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಓರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ‌‌ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.