



ನಟಿ ಮತ್ತು ರಿಯಾಲಿಟಿ ಟಿವಿ ತಾರೆ ಪೂನಂ ಪಾಂಡೆ ಗುರುವಾರ ರಾತ್ರಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಶುಕ್ರವಾರ ಹೇಳಿದ್ದರು. ಆಕೆಯ ಸಾವಿನ ಸುದ್ದಿಯನ್ನು ಆಕೆಯ ತಂಡವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿತ್ತು. ಆದರೆ, ಪೂನಂ ಜೀವಂತವಾಗಿದ್ದಾರೆ ಎನ್ನುವ ರೀತಿಯ ಪೋಸ್ಟ್ ಗಳು ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿವೆ. ಪೂನಂ ಅವರ ‘ಅನಿರೀಕ್ಷಿತ’ ಸಾವಿಗೆ ಹಲವಾರು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದರೆ, ಆಕೆಯ ಸಾವಿನ ಕಾರಣದ ಬಗ್ಗೆ ಊಹಾಪೋಹಗಳು ಎದ್ದಿವೆ, ಜೊತೆಗೆ ಅವರ ಸಾವಿನ ಬಗ್ಗೆ ಅವರ ಕುಟುಂಬ ಮೌನವಾಗಿರುವುದು ಕೂಡಾ ಅನುಮಾನ ಹುಟ್ಟುಹಾಕಿದೆ.
ಪೂನಂ ಪಾಂಡೆ ಸಾವಿನ ಘೋಷಣೆಯ ನಂತರ ಅವರ ಕುಟುಂಬವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ವರದಿಗಳು ಹೇಳಿವೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಪೂನಂ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು ಅಥವಾ ತಲುಪಲಾಗಲಿಲ್ಲ ಎಂದು ಮೂಲವೊಂದು ಬಹಿರಂಗಪಡಿಸಿದೆ. ಇಂಡಿಯಾ ಟುಡೇಗೆ ನೀಡಿದ ಹೊಸ ಸಂದರ್ಶನದಲ್ಲಿ, ಪೂನಂ ಪಾಂಡೆಯ ಅಂಗರಕ್ಷಕ ಅಮೀನ್ ಖಾನ್ ಅವರು ಸೋಮವಾರ ಅವರನ್ನು ಕೊನೆಯ ಬಾರಿಗೆ ನೋಡಿದ್ದಾರೆಂದು ಹೇಳಿದ್ದರೆ. ಪೂನಂ ತಂಡದ ಪ್ರಕಾರ, ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಆಕೆ ತನ್ನ ಅನಾರೋಗ್ಯದ ಬಗ್ಗೆ ತನಗೆ ಅಥವಾ ಅವರ ಯಾವುದೇ ಸಿಬ್ಬಂದಿ ಬಳಿ ಎಂದಿಗೂ ಪ್ರಸ್ತಾಪಿಸಲಿಲ್ಲ ಎಂದು ಅಮೀನ್ ಹೇಳಿದದ್ದಾರೆ ಮತ್ತು ಪೂನಂ ಅವರ ಸಹೋದರಿ ಸೇರಿದಂತೆ ಅವರ ಕುಟುಂಬವು ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.