



ಶ್ರೀಹರಿಕೋಟ: ಚಂದ್ರಯಾನ–3ರ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್’ನಿಂದ ಹೊರಬಂದ ನಂತರ ಚಂದ್ರನ ಅಂಗಳದಲ್ಲಿ ಬರೋಬ್ಬರಿ 100 ಮೀಟರ್ ಚಲನೆ ಮಾಡಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಇಸ್ರೊ, ಪ್ರಗ್ಯಾನ್ 100 ಮೀಟರ್–ನಾಟ್ ಔಟ್! ಎಂದೂ ಅದು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಪ್ರಗ್ಯಾನ್ ರೋವರ್ ಶಿವಶಕ್ತಿ ಪಾಯಿಂಟ್ ನಿಂದ 100 ಮೀಟರ್ ಚಲನೆ ಮಾಡಿದರೂ ಇನ್ನೂ ಚಲನೆ ಮಾಡಲಿದೆ. ಸಂಶೋಧನೆ ಮುಂದುವರೆಸಲಿದೆ. ಇದೊಂದು ಹೊಸ ದಾಖಲೆ ಎಂದು ಹೇಳಿದೆ.
ಚಂದ್ರನ ಅಂಗಳದಲ್ಲಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಅನ್ನು ಚಂದ್ರನ ರಾತ್ರಿ ಸಮಯದ ಕನಿಷ್ಠ ತಾಪಮಾನ ತಡೆದುಕೊಳ್ಳಲು ಎರಡು ದಿನದಲ್ಲಿ ಸ್ಲೀಪ್ ಮೋಡ್‌ಗೆ ಬದಲಾಯಿಸುತ್ತೇವೆ ಎಂದು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ಅವರು ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.