logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಾ.23 ರಂದು ಪ್ರಸಾದ್ ಶೆಣೈ ಅವರ "ನೇರಳೆ ಐಸ್ ಕ್ರೀಂ ಕೃತಿ ಬಿಡುಗಡೆ.

ಟ್ರೆಂಡಿಂಗ್
share whatsappshare facebookshare telegram
21 Mar 2025
post image

ಉಡುಪಿ: ಯುವ ಕತೆಗಾರ, ಟೋಟೋ ಪ್ರಶಸ್ತಿ ಪುರಸ್ಕೃತ ಬರಹಗಾರ, ಉಡುಪಿXPRESS.com ತಂಡದ ಕ್ರಿಯೇಟಿವ್ ಎಡಿಟರ್ ಪ್ರಸಾದ್ ಶೆಣೈ ಆರ್ ಕೆ ಅವರ ಹೊಸ ಕಥಾ ಸಂಕಲನ "ನೇರಳೆ ಐಸ್ ಕ್ರೀಂ" ಮಾ.23 ರಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಿಡುಗಡೆಗೊಳ್ಳಲಿದೆ. ನಾಡಿನ ಪ್ರತಿಷ್ಠಿತ, ಜನಪ್ರಿಯ ಪ್ರಕಾಶನ ಸಂಸ್ಥೆಯಾಗಿರುವ ವೀರಲೋಕ ಬುಕ್ಸ್ ಈ ಕಥಾ ಸಂಕಲನವನ್ನು ಪ್ರಕಟಿಸುತ್ತಿದೆ. ಮಾ‌23 ರಂದು ವೀರಲೋಕ ಸಂಸ್ಥೆ ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ಹತ್ತು ಲೇಖಕರ ವಿಶಿಷ್ಟ ಕೃತಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ಕೃತಿಯಲ್ಲಿ ಪ್ರಸಾದ್ ಶೆಣೈ ಅವರ "ನೇರಳೆ ಐಸ್ ಕ್ರೀಂ" ಕೂಡ ಬಿಡುಗಡೆಗೊಳ್ಳುತ್ತಿದೆ. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ, ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಸಾದ್ ಶೆಣೈ ಅವರು ಮೂಲತ ಕಾರ್ಕಳದವರು, ಲೂಲು ಟ್ರಾವೆಲ್ಸ್, ಒಂದು ಕಾಡಿನ ಪುಷ್ಪಕ ವಿಮಾನ ಕೃತಿಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ. ನಾಡಿನ ಪತ್ರಿಕೆಗಳಲ್ಲಿ ಇವರ ನುಡಿಚಿತ್ರ, ಲೇಖನ, ಕತೆಗಳು ಪ್ರಕಟಗೊಂಡಿವೆ. ಪ್ರಜಾವಾಣಿ, ವಿಜಯವಾಣಿ, ತುಷಾರ, ಸಂಕ್ರಮಣ, ವಿಜಯಕರ್ನಾಟಕ ಕಥಾ ಸ್ಪರ್ಧೆ ಗಳಲ್ಲಿ ಇವರ ಕತೆಗಳು ಬಹುಮಾನ ಪಡೆದಿವೆ. ಪ್ರಸ್ತುತ ಕಂಟೆಂಟ್ ರೈಟರ್, ಫ್ರೀಲಾನ್ಸರ್, ಕೃಷಿ ಬಿಂಬ ಪತ್ರಿಕೆಯ ಉಪಸಂಪಾದಕ ಹಾಗೂ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. "ನೇರಳೆ ಐಸ್ ಕ್ರೀಂ" ಕೃತಿಯ PRE Order ಶುರುವಾಗಿದ್ದು, ಬಿಡುಗಡೆ ಪೂರ್ವ ಬೆಲೆ ₹ 180, ಅಂಚೆವೆಚ್ಚ ಪ್ರತ್ಯೇಕ,ಬಿಡುಗಡೆ ನಂತರದ ಬೆಲೆ ₹225, ಅಂಚೆವೆಚ್ಚ ಪ್ರತ್ಯೇಕ. PRE order ಗಾಗಿ ವೀರಲೋಕ ಬುಕ್ಸ್ ನ 7022122121, 8861212172 ಈ ಸಂಖ್ಯೆಗೆ whatsap /call ಮಾಡಬಹುದು.ಬಿಡುಗಡೆ ಬಳಿಕ ಪುಸ್ತಕ ನಿಮ್ಮ ವಿಳಾಸಕ್ಕೆ ತಲುಪುತ್ತದೆ..

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.