logo
WhatsApp Image 2026-04-02 at 14.46.04.jpeg
hindalco everlast.jpeg

ಪ್ರವೀಣ್ ನೆಟ್ಟಾರ್ ಕೊಲೆ ಖಂಡನೀಯ : ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ ಅರ್ ರಾಜು

ಟ್ರೆಂಡಿಂಗ್
share whatsappshare facebookshare telegram
30 Jul 2022
post image

ಕಾರ್ಕಳ: ಬಿಜೆಪಿ ಯುವ ನೇತಾರ, ಹಿಂದೂ ಯುವ ಮುಖಂಡ ಬಿಲ್ಲವ ಜನಾಂಗದ ಯುವ ನಾಯಕ ನೆಟ್ಟಾರು ಪ್ರವೀಣ್ ಕೊಲೆ ಖಂಡನೀಯ. ಈ ಕೊಲೆಯ ಹಿಂದಿರುವ ಕಾಣದ ಕೈಗಳ ದುಷ್ಟ ಪ್ರವ್ರತ್ತಿಗೆ ಸರಕಾರ ಕಾನೂನಿನ ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಕಠಿಣ ಶಿಕ್ಷೆ ನೀಡುವ ಅನಿವಾರ್ಯತೆಯನ್ನು ಸರಕಾರ ಮನಗಾಣಬೇಕೆಂದು ಕಾರ್ಕಳ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಡಿ ಆರ್ ರಾಜು ಆಗ್ರಹಿಸಿದರು ನೆಟ್ಟಾರು ಪ್ರವೀಣ್ ಪೂಜಾರಿ ಯವರು ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ಗೆಜ್ಜೆ ಗಿರಿ ಕೋಟಿ ಚೆನ್ನಯ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದು ಜನಾನುರಾಗಿ ದ್ದರು ಸಂಘಟನೆಯ ಹೆಸರಿನಲ್ಲಿ ಅಮಾಯಕ ಯುವಕರನ್ನು ಮನಸ್ಸಿನಲ್ಲಿ ಜಾತಿ ಧರ್ಮದ ದ್ವೇಷದ ಕಿಚ್ಚನ್ನು ಹೊತ್ತಿಸಿ ಅದರಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಲು ಹೊರಟಿರುವ ತಮ್ಮ ವಿಕ್ರತ ಮನಸ್ಸಿಗೆ ಯುವ ಜನತೆಯನ್ನು ಬಲಿಕೊಟ್ಟು ಅವರ ಬಡ ಕುಟುಂಬವನ್ನು ಬೀದಿಪಾಲು ಮಾಡುವ ತಾವು ಯಾವತ್ತೂ ಅವರ ಕುಟುಂಬದ ಕಣ್ಣೀರ ಶಾಪದಿಂದ ಮುಕ್ತರಾಗುತ್ತೀರಿ ಎಂದು ಭಾವಿಸಿದ್ದರೆ ಅದು ತಮ್ಮ ಮೂರ್ಖತನ ಎಂದು ಹೇಳಿಕೆ ನೀಡಿದ ಅವರು ಜಾತಿ ಧರ್ಮದ ಬಗ್ಗೆ ಕಂದಕ ತೋಡುವುದನ್ನು ಬಿಟ್ಟು ಸೌಹಾರ್ದ ಸಮಾಜವನ್ನು ನಿರ್ಮಾಣ ಮಾಡುವತ್ತ ಗಮನ ಹರಿಸಿ ಎಂದು ಅವರು ಕರೆ ನೀಡಿದರು ತಮ್ಮ ರಾಜಕೀಯದ ದುರಾಸೆಗೆ ಯುವ ಜನಾಂಗವನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಟ್ಟು ಅವರ ಸುಂದರ , ಸುಮಧುರ, ಸಂತುಷ್ಟ ಜೀವನಕ್ಕೆ ದಾರಿಯಾಗುವ ಉನ್ನತ ಶಿಕ್ಷಣ ಉದ್ಯೋಗ ಕೊಡಿಸುವಲ್ಲಿ ಪ್ರಯತ್ನಿಸುವುದು ತಮ್ಮ ಜೀವನದ ಉದ್ದೇಶವಾಗಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.