logo
WhatsApp Image 2026-04-02 at 14.46.04.jpeg
hindalco everlast.jpeg

ನಂದಳಿಕೆ ಸಿರಿಜಾತ್ರೆ ಪೂರ್ವಭಾವಿ ಸಭೆ.

ಟ್ರೆಂಡಿಂಗ್
share whatsappshare facebookshare telegram
7 Mar 2022
post image

ಬೆಳ್ಮಣ್ : ಇತಿಹಾಸ ಪ್ರಸಿದ್ದ ನಾಲ್ಕುಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಸಂಭ್ರಮದ ಸಿರಿಜಾತ್ರೆ ಅಯನೋತ್ಸವ ಮಾರ್ಚ್ ೧೮ ರಂದು ಜರುಗಲಿದ್ದು ಆ ಪ್ರಯುಕ್ತ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಮಾತನಾಡಿ ಶ್ರದ್ದೆ, ಭಕ್ತಿ, ನಂಬಿಕೆ ಆಚಾರ ವಿಚಾರದಲ್ಲಿ÷ ನಂದಳಿಕೆ ಅಗ್ರಸ್ಥಾನದಲ್ಲಿದೆ. ಇಲ್ಲಿನ ಊರ ಮಂದಿಯ ಸಹಕಾರದಿಂದ ಹಾಗೂ ಒಗ್ಗಟ್ಟಿನ ಸೇವೆಯಿಂದ ನಂದಳಿಕೆ ಸಿರಿಜಾತ್ರೆ ಯಶಸ್ವಿಯಾಗಿ ಜರುಗಲು ಸಾಧ್ಯವಾಗಿದೆ. ನಾವೆಲ್ಲ ದೇವರ ಸೇವೆಯನ್ನು ಶ್ರದ್ದಾ ಭಕ್ತಿಯಿಂದ ಮಾಡಬೇಕಾಗಿದೆ ಎಂದರು. ದೇವಳದ ಪ್ರಧಾನ ಅರ್ಚಕ ಹರೀಶ್ ತಂತ್ರಿ ಮಾತನಾಡಿ ಕ್ಷೇತ್ರದಲ್ಲಿ ಉತ್ಸವ ಸಂದರ್ಭ ಜರುಗುವ ಧಾರ್ಮಿಕ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ನಂದಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ನಿತ್ಯಾನಂದ ಅಮೀನ್, ನಂದಳಿಕೆ ಕಾನಬೆಟ್ಟು ದಿವಾಕರ ಶೆಟ್ಟಿ, ದೇವಾಲಯದ ವ್ಯವಸ್ಥಾಪಕ ರವಿರಾಜ್ ಭಟ್, ಮತ್ತಿತರಿದ್ದರು. ನಿವೃತ್ತ ಶಿಕ್ಷಕ ವಿ.ಕೆ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.